ಬಣಕಲ್:ರಾಜ್ಯದಲ್ಲಿ ಕಳೆದ 6 ತಿಂಗಳಿಂದ ಕೋವಿಡ್ 19 ರ ಹೊಡೆತಕ್ಕೆ ಜಾನಪದ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರ ಜಾನಪದ ಕಲಾವಿದರ ನೆರವಿಗೆ ಬರಬೇಕು ಎಂದು ಮೂಡಿಗೆರೆ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಬಕ್ಕಿ ಮಂಜುನಾಥ್ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ಕಳೆದ 6 ತಿಂಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಇಲ್ಲದೆ ಕಲಾವಿದರು ತೊಂದರೆಯಲ್ಲಿದ್ದಾರೆ. ಗ್ರಾಮೀಣ ಪ್ರದೇಶದ ಹಾಗೂ ನಗರ ಪ್ರದೇಶದ ಜಾನಪದ ಕಲಾವಿದರಿಗೆ ಆರ್ಥೀಕ ಪರಿಸ್ಥಿಯನ್ನು ಎದುರಿಸಲಾಗದೆ ಕಂಗೆಟ್ಟಿದ್ದಾರೆ. ಸರ್ಕಾರ ಈ ಹಿಂದೆ ಆರ್ಥಿಕ ಸಹಾಯ ನೀಡುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ಮೂಲಕ ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಕಲಾವಿದÀರಿಗಾಗಿ ಜಿಲ್ಲೆಗೆ 2 ಕೋಟಿ ಪರಿಹಾರದ ಹಣ ಬಿಡುಗಡೆ ಮಾಡಿದ್ದು ಜಿಲ್ಲೆಯಲ್ಲಿ ಸುಮಾರು 12 ಸಾವಿರ ಜಾನಪದ ಕಲಾವಿದರಿದ್ದು 2000 ಕಲಾವಿದರಿಗೆ ಕರೊನಾ ಸಮಯದಲ್ಲಿ 2 ಸಾವಿರದಂತೆ ಪರಿಹಾರ ನೀಡಲಾಗಿದೆ. ಸುಮಾರು 40 ಲಕ್ಷ ಪರಿಹಾರ ಕಲಾವಿದರಿಗೆ ತಲುಪಿದ ಉಳಿದ 1.6 ಕೋಟಿ ಹಣ ಎಲ್ಲಿ ಎಂದು ಪ್ರಶ್ನಿಸಿದರು.
ಮೂಡಿಗೆರೆ ತಾಲ್ಲೂಕಿನಲ್ಲಿ 150 ಕಲಾವಿದರು ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು ಕೇವಲ 2-3 ಮಂದಿಗೆ ಪರಿಹಾರ ಬಂದಿದೆ. ಕಲೆಯನ್ನೆ ನಂಬಿರುವ ಕಲಾವಿದರು ಇದರಿಂದ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ಕೇವಲ ಅವರ ಅನುಕೂಲಕ್ಕೆ ತಕ್ಕಂತೆ ಬೇಕಾ ಬಿಟ್ಟಿಯಾಗಿ ಜನಪದ ಕಲಾವಿದರನ್ನು ಬಳಸಿಕೊಂಡು ಮನ ಬಂದಂತೆ ನಡೆದುಕೊಳ್ಳುತ್ತಿದೆ. ಈ ನಡೆ ಸರಿಯಲ್ಲ. ಎಷ್ಟೋ ಕಲಾವಿದರು ಕಾರ್ಯಕ್ರಮ ನೀಡಿ ಅದರಿಂದ ಬದುಕು ಕಟ್ಟಿಕೊಂಡಿದ್ದರು. ಸರ್ಕಾರ ಕೂಡಲೇ ಜಾನಪದ ಕಲಾವಿದರ ನೆರವಿಗೆ ಬರಬೇಕು. ಇಲ್ಲವಾದಲ್ಲಿ ರಾಜ್ಯದ ಎಲ್ಲಾ ಕಲಾವಿದರು ಸರ್ಕಾಋದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಹಾಗೂ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
Tags
ಚಿಕ್ಕಮಗಳೂರು