ಬಂಧನ ಭೀತಿಯಿಂದ ವಕೀಲ ಭೇಟಿ ಮಾಡಿದ ನಟಿ ರಾಗಿಣಿ


ಕನ್ನಡದ ನಟಿ ರಾಗಿಣಿ ಎಸ್ಕೇಪ್ ಆದರೆಂದೇ ಸುದ್ದಿಯಾಗಿತ್ತು. ಈಗ ಅವರು ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ವಕೀಲರ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.ರಾಗಿಣಿಯ ಆಪ್ತ ರವಿಶಂಕರ್ ನನ್ನು ನಿನ್ನೆ ಸಿಸಿಬಿಯವರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆತ ರಾಗಿಣಿಯ ಹೆಸರೇಳಿದ್ದರಿಂದ ರಾಗಿಣಿಗೆ ಇಂದು ಬೆಳಿಗ್ಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿತ್ತು. ನಟಿ ರಾಗಿಣಿ ವಕೀಲರನ್ನು ಭೇಟಿ ಆಗಿ ಸಿಸಿಬಿ ಆಫೀಸ್ ಗೆ ಬರುವ ನಿರೀಕ್ಷೆ ಇದೆ. ಒಂದು ವೇಳೆ ಆಕೆ ಬರದೇ ಸಮಯ ಕೇಳಲೂ ಬಹುದು. ಅಥವಾ ಗೈರು ಹಾಜರಾದರೆ ಆಕೆಗೆ ಸಂಕಷ್ಟ ಶುರುವಾಗಬಹುದು ಎನ್ನಲಾಗಿದೆ.ರವಿಶಂಕರ್ ಮತ್ತು ರಾಗಿಣಿ ಆಪ್ತ ಸ್ನೇಹಿತರಾಗಿದ್ದು ಈ ಹಿಂದೆ ಹೋಟೆಲ್ ಒಂದರಲ್ಲಿ ರವಿಶಂಕರ್ ಮತ್ತು ಅವನ ಸ್ನೇಹಿತ ಇಬ್ಬರೂ ಕಿತ್ತಾಡಿಕೊಂಡಿದ್ದರು. ಆಗ ಅಲ್ಲಿಯೇ ನಟಿ ರಾಗಿಣಿ ಇದ್ದರು.

Post a Comment

Previous Post Next Post