ಕೊನೆಗೂ ಐಪಿಎಲ್ ಶೆಡ್ಯೂಲ್ ಬಿಡುಗಡೆಗೆ ಮುಹೂರ್ತ ಫಿಕ್ಸ್

ಮುಂಬೈ: ಬಹುನಿರೀಕ್ಷಿತ 2020ರ ಐಪಿಎಲ್ ಆವೃತ್ತಿ ಸೆ.19 ರಿಂದ ಆರಂಭವಾಗುತ್ತಿದ್ದು, ಆದರೆ ಇದುವರೆಗೂ ಟೂರ್ನಿಯ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿಲ್ಲ. ಸದ್ಯ ಈ ಕುರಿತು ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಗಂಗೂಲಿ, ಟೂರ್ನಿಯ ಶೆಡ್ಯೂಲ್ ಬಿಡುಗಡೆಯಾಗುವ ದಿನಾಂಕವನ್ನು ತಿಳಿಸಿದ್ದಾರೆ.


ಗಂಗೂಲಿ ಟೂರ್ನಿಯ ಶೆಡ್ಯೂಲ್ ಬಿಡುಗಡೆ ಕುರಿತು ಎಬಿಪಿ ನ್ಯೂಸ್‍ನೊಂದಿಗೆ ಮಾತನಾಡಿದ್ದು, ಬಿಸಿಸಿಐ ಟೂರ್ನಿಯ ವೇಳಾಪಟ್ಟಿಯನ್ನು ಸೆ.4ರ ಶುಕ್ರವಾರದಂದು ಬಿಡುಗಡೆ ಮಾಡಲಿದೆ ಎಂದಿದ್ದಾರೆ.

ಮಾಧ್ಯಮ ವರದಿಗಳ ಅನ್ವಯ ಟೂರ್ನಿಯ ವೇಳಾಪಟ್ಟಿಯನ್ನು ಈ ಹಿಂದೆಯೇ ಬಿಡುಗಡೆ ಮಾಡಲು ಬಿಸಿಸಿಐ ಸಿದ್ಧತೆ ನಡೆಸಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ 12 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಶೆಡ್ಯೂಲ್ ಬಿಡುಗಡೆಯನ್ನು ಮುಂದೂಡಿತ್ತು. ಆದರೆ ಸದ್ಯ ಸಿಎಸ್‍ಕೆ ತಂಡದ ಸದಸ್ಯರು ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದು, ಶೆಡ್ಯೂಲ್ ಬಿಡುಗಡೆಗೆ ಮುಹೂರ್ತ ನಿಗದಿ ಮಾಡಿದೆ.

ಆದರೆ ಬಿಸಿಸಿಐ ಇಡೀ ಟೂರ್ನಿಯ ಶೆಡ್ಯೂಲ್ ಬಿಡುಗಡೆ ಮಾಡಲಿದೇಯಾ ಅಥವಾ ಹಂತ ಹಂತದಲ್ಲಿ ವೇಳಾಪಟ್ಟಿ ಬಿಡುಗಡೆ ಮಾಡುತ್ತಾ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಲಭಿಸಿಲ್ಲ. ಇತ್ತ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಯಾವ ದಿನಾಂಕದಲ್ಲಿ ಕಣಕ್ಕಿಳಿಯಲಿದೆ ಎಂದು ತಿಳಿದುಕೊಳ್ಳಲು ಕಾತುರರಾಗಿದ್ದಾರೆ.

Post a Comment

Previous Post Next Post