ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಯುವಕ.

ಹಾಸನ: ಅಂಗಡಿಯ ಕ್ಯಾಶ್ ಕೌಂಟರ್ ನಲಿ ಕುಳಿತಿದ್ದ ಮಹಿಳೆ ಮುಂದೆ ಯುವಕನೊಬ್ಬ ಪ್ಯಾಂಟ್ ಬಿಚ್ಚಿ ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.

ನಗರದ ಉತ್ತರ ಬಡಾವಣೆಯಲ್ಲಿರುವ ಅಂಗಡಿಯೊಂದರಲ್ಲಿ ಘಟನೆ ನಡೆದಿದೆ. ಮಾಲೀಕ ಸ್ಟೋರ್ ಗೆ ಬೇಕಾದ ವಸ್ತುಗಳನ್ನು ತರಲು ಹೋಗಿದ್ದರಿಂದ ಅವರ ಪತ್ನಿ ಅಂಗಡಿ ನೋಡಿಕೊಳ್ಳುತ್ತಿದ್ದರು. ಕಾಮುಕ ಯುವಕ ಅಂಗಡಿಯೊಳಗೆ ಮಹಿಳೆ ಒಬ್ಬರೇ ಇರೋದನ್ನು ಗಮನಿಸಿ ಒಳಗೆ ಬಂದಿದ್ದಾನೆ. ಬಂದವನೇ ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಹಸ್ತಮೈಥುನ ಮಾಡಿಕೊಂಡು ಪರಾರಿಯಾಗಿದ್ದಾನೆ.

Post a Comment

Previous Post Next Post