ಸಂಸ್ಕೃತಿಯನ್ನು ಉಳಿಸಿ, ಸಂಸ್ಕೃತಿಯನ್ನು ವಿಕೃತಿಗೊಳಿಸಬೇಡಿ : ಶಂಭುನಾಥ ಸ್ವಾಮೀಜಿ

ಸಂಸ್ಕೃತಯನ್ನು ಉಳಿಸಿ, ಸಂಸ್ಕೃತಿಯ ನ ವಿಕೃತಿಗೊಳಿಸಬೇಡಿ ಎಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನಪಠದ ಪರಮ ಪೂಜ್ಯ ಶ್ರೀಶ್ರೀ ಶಂಭುನಾಥ ಸ್ವಾಮೀಜಿ ಹೇಳಿದ್ದಾರೆ.
ಅವರು ಪಟ್ಟಣ ಸಮೀಪದ ವೃಕ್ಷ ಪ್ರೇಮಿ ಸಿ.ಎನ್. ಅಶೋಕ್ ತೋಟದಲ್ಲಿ ಅಶೋಕ್ ಬೆಳೆಸಿದ 30 ಸಾವಿರ ಗಿಡಗಳ ಉಚಿತ ವಿತರಣಾ ಕಾರ್ಯಕ್ರಮದಲ್ಲಿ ಪಾವನಸಾಧ್ಯ ವಹಿಸಿ ಆಶಿರ್ವಾದ ನೀಡಿ ಜಿಲ್ಲೆ ಆತಂಕದಲ್ಲಿದೆ. ಕೊರೋನಾ ಸೋಂಕು ವಿಶ್ವದ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಇದು ದೊಡ್ಡ ಕಾಯಿಲೆ ಅಲ್ಲದಿದ್ದರೂ ಭಯಪಡಬೇಆಗಿದೆ. ನಮ್ಮ ಉಸಿರಿಗಾಗಿ ಗಿಡ-ಮರ ಬೇಕಾಗಿದೆ. ಅನೇಕರು ಕೊರೋನಾದಿಂದ ದೂರವಾಗುತ್ತಿದ್ದಾರೆ. ಹಳ್ಳಿಗಳಲ್ಲಿನ ಆಹಾರ ಪದ್ದತಿಯಿಂದ ಕೊರೋನಾ ಸಂಖ್ಯೆ ಕಡಿಮೆವಿರಬಹುದು. ಶ್ರೀಗಳ ಆಶಿರ್ವಾದದಿಂದ ಅಶೋಕ್ 30 ವರ್ಷಗಳಿಂದ ಗಿಡ ಬೆಳೆಸಿ ಉಚಿತವಾಗಿ ನೀಡುವ ಕಾರ್ಯ ಪ್ರಶಂಶನೀಯ ಎಂದರು.
ಶಾಸಕ ಸಿ.ಎನ್. ಬಾಲಕೃಷ್ಣವರು ಭೈರವೈಕ್ಯ ಶ್ರೀಶ್ರೀ ಡಾ// ಬಾಲಗಂಗಾಧರನಾಥಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನ್ನಾಡಿದರು.
ಪರಿಸರ ಪ್ರೇಮಿ ಸಿ.ಎನ್.ಅಶೋಕ್, ಡಿ.ವೈಎಸ್.ಪಿ. ಲಕ್ಷ್ಮೇಗೌಡರು, ಬಿ.ಇ.ಒ.ಸೋಮನಾಥ್, ನೀಲಾಸ್ವಾಮಿ, ಸಂಸ್ಥೇಯ ಸಂಸ್ಥಾಪಕ ನಂಜುಂಡೇಗೌಡರು, ಜಯಮ್ಮ, ಪ್ರಕಾಶ್‍ಜೈನ್ ಇದ್ದರು.

Post a Comment

Previous Post Next Post