ಬೇಲೂರು: ರಾಷ್ಟ್ರಪತಿ ಪದಕ ಪುರಸ್ಕೃತ ಹಾಗೂ ಕಲಾ ಶಿಕ್ಷಕ ಬೇಲೂರಿನ ಬಿ.ಎ.ಬಾಲಕೃಷ್ಣ ಅವರಿಗೆ ದೆಹಲಿ ಯರಿಗಾರ್ಡನ್ ಇಂಕ್ ಸಂಸ್ಥೆ 2019ನೇ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಿದೆ.
ದೆಹಲಿಯ ರಿಗಾರ್ಡನ್ ಇಂಕ್ಸಂಸ್ಥೆ ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗೌರವಿಸುತ್ತಿದ್ದು, ಈ ಬಾರಿ ರಾಜ್ಯದಿಂದ ಕಲಾ ಶಿಕ್ಷಕ ಬಿ.ಎ.ಬಾಲಕೃಷ್ಣ ಅವರನ್ನು ಗುರುತಿಸಿದೆ.
ಕೋವಿಡ್ ಕಾರಣದಿಂದ ಪ್ರಶಸ್ತಿ ಪಡೆಯಲು ದೆಹಲಿಗೆ ತೆರಳಲು ಸಾಧ್ಯವಾಗದೆ ಇರುವುದರಿಂದ ಸಂಸ್ಥೆಯವರೇ ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ಅಂಚೆ ಮೂಲಕ ಕಳುಹಿಸಿದ್ದಾರೆ.
ಬೇಲೂರಿನವರಾದ ಬಿ.ಎ.ಬಾಲಕೃಷ್ಣ, ಹಾಸನದ ಉರ್ದು ಪ್ರೌಢಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ರಾಷ್ಟ್ರಪತಿ ಪದಕ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.
Tags
ಬೇಲೂರು