ಸಾಗರದ ತಾಲೂಕು ಪಂಚಾಯತ್ ನಲ್ಲಿ ಭರ್ಜರಿ ಡ್ರಾಮ ಹೈಡ್ರಾಮಾ ನಡೆದು ನಂತರ ಪಂಚಾಯತಿ ಮೂಲಕ ಬಗೆಹರಿದ ಘಟನೆ ಇಂದು ನಡೆದಿದೆ.
ಸಾಗರ ತಾಲುಕು ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ನ ಮೂವರು ಸದಸ್ಯರು ಸರಿಸುಮಾರು ಮುಕ್ಕಾಲು ಗಂಟೆ ತಡವಾಗಿ ಬಂದಿದ್ದಕ್ಕೆ ಹೊರ ಹಾಕಲಾದ ವಿಷಯಕ್ಕೆ ಸಂಬಂಧಿಸಿದಂತೆ ಭರ್ಜರಿ ಡ್ರಾಮಾ ಹಾಗೂ ಹೈಡ್ರಾಮ ನಡೆದಿದೆ.
ಸಾಗರ ತಾಲೂಕು ಪಂಚಾಯತ್ ಸಾಮಾನ್ಯ ಸಭೆ ಕರೆಯಲಾಗಿದ್ದು ತಾಪಂನ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹಾಗೂ ಉಪಾಧ್ಯಕ್ಷ ಅಶೋಕ್ ರವರಿಬ್ಬರಿಗು ಕೊರೋನ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಸಭೆಯನ್ನ ನಡೆಸುವುದು ಅನುಮಾನ ಎಂಬ ಶಂಕೆಯ ಹಿನ್ನಲೆಯಲ್ಲಿ ಹಾಗೂ ಮಾಜಿ ರಾಷ್ಟ್ರಪತಿ ಪ್ರಣಬ್ ಮುಕರ್ಜಿರವರ ನಿಧನದಿಂದ ರಾಜ್ಯಾದ್ಯಂತ 1 ವಾರ ಶೋಕಾಚರಣೆ ಜಾರಿಯಿರುವ ಹಿನ್ನಲೆಯಲ್ಲಿ ತಡವಾಗಿ ಬಂದ ಮೂವರು ಸದಸ್ಯರನ್ನ ಸಭೆಯಿಂದ ಹೊರಹಾಕಲಾಗಿತ್ತು.
ಇವತ್ತು ಸಭೆಯು ಹಂಗಾಮಿ ಅಧ್ಯಕ್ಷೆ ಜ್ಯೋತಿ ಮುರಳಿಧರ್ ರವನ್ನ ಆಯ್ಕೆ ಮಾಡಿಕೊಂಡು ಆರಂಭಗೊಂಡಿತ್ತು. 11-30 ರಂದು ಆರಂಭಗೊಂಡ ಸಭೆಗೆ 12-20 ರ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರಾದ ಆನಂದಿ ಲಿಂಗರಾಜ್ (ಆನಂದಪುರ ಕ್ಷೇತ್ರ) ಹಾಗೂ ಗೌತಮ್ ಪುರ ಕ್ಷೇತ್ರದ ಸದಸ್ಯೆ ಹೇಮಾ ರಾಜಪ್ಪ ಆಗಮಿಸಿದರು. ಆದರೆ ದೇವೇಂದ್ರಪ್ಪ ಯಲಕುಂದಿ ಸಭೆಯಲ್ಲಿ ಎದ್ದು ಮಾತನಾಡಿ ಸಭೆ ಆರಂಭಗೊಂಡು 30 ನಿಮಿಷದವರೆಗೆ ಮಾತ್ರ ಸದಸ್ಯರಿಗೆ ಅವಕಾಶವಿದ್ದು ತದನಂತರ ಬರುವ ಸದಸ್ಯರಿಗೆ ಸಭೆಯಲ್ಲಿ ಕೂರುವ ಅವಕಾಶವಿಲ್ಲವೆಂದು ತಿಳಿಸಿದರು. ಇದನ್ನ ಸದಸ್ಯರ ನಿರ್ಣಯಕ್ಕೆ ಬಿಟ್ಟ ಅಧ್ಯಕ್ಷೆ ಜ್ಯೋತಿ ಮುರಳೀಧರ್ ಸಭೆ ಏನು ನಿರ್ಣಯ ತೆಗೆದುಕೊಳ್ಳುತ್ತದೆಯೋ ಹಾಗೆ ನಡೆದುಕೊಳ್ಳುವುದಾಗಿ ತಿಳಿಸಿದರು.
8 ಜನ ಹಾಜರಿದ್ದ ಸದ್ಯರಲ್ಲಿ 6 ಜನ ಸದಸ್ಯರು ಸಹಮತ ಸೂಚಿಸಿದ ಪರಿಣಾಮ ಮೂವರು ಸದಸ್ಯರು ಸಭೆಯಿಂದ ಹೊರಹೋಗುವ ಅನಿವಾರ್ಯತೆ ಒದಗಿಬಂತು.
ನಂತರ ಶ್ರೀಮತಿ ಆನಂದಿ ಲಿಂಗರಾಜ್ ಮಾತನಾಡಿ ನಮಗೆ ಈ ದಿನ ಸಭೆ ಇದೆ ಎಂದೂ ಗೊತ್ತಿಲ್ಲಾ,ಇದೀಗ ನಮ್ಮ ಮನೆಗೆ ನೋಟೀಸ್ ತಲುಪಿರುವದೆ ಈಗ.ನಿನ್ನೆ ರಾತ್ರಿಯಿಡೀ ಇ.ಒ ಗೆ ಫೋನಾಯಿಸಿದರೂ ಫೋನ್ ರಿಸೀವ್ ಮಾಡಿರುವುದಿಲ್ಲ, ಈ ದಿನ ಬೆಳಿಗ್ಗೆ ನಾವೇ ಸದಸ್ಯರಾದ ಚಂದ್ರಪ್ಪ ರವರಿಗೆ ಕಾಲ್ ಮಾಡಿ ಸಭೆ ನಡೆಯುವ ಬಗ್ಗೆ ಕೇಳಿದಾಗ ಸಭೆ ನಡೆಯುತ್ತದೆ ಬನ್ನಿ ಎಂದು ತಿಳಿಸಿದ ಮೇರೆಗೆ ನಾವು ಸಭೆಗೆ ಹಾಜರಾಗಿದ್ದೇವೆ ಎಂದರು.
ನಮ್ಮನ್ನು ಸಭೆಗೆ ಅವಮಾನ ಮಾಡುವ ಉದ್ದೇಶದಿಂದಲೇ ಕರೆಸಿರುತ್ತಾರೆ, ಈಗ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರವರು ಮೃತಪಟ್ಟಿರುವ ಹಿನ್ನಲೆಯಲ್ಲಿ ಶೋಕಾಚರಣೆ ಇದೆ ಹಾಗೂ ಆರೋಗ್ಯ ಇಲಾಖೆಯಿಂದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಕರೋನಾ ಪಾಜಿಟಿವ್ ಬಂದಿರುವುದರಿಂದ ತಾಲ್ಲೂಕು ಪಂಚಾಯಿತಿ ಕಛೇರಿಯನ್ನು ಸೀಲ್ ಡೌನ್ ಮಾಡಲಾಗುವುದು ಆದ್ದರಿಂದ ಈ ದಿನದ ಸಭೆಯನ್ನು ಮುಂದೂಡಬೇಕು ಎಂದು ತಿಳಿಸಿರುತ್ತಾರೆ, ಆದರೂ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಇ ಒ ರವರ ಮೇಲೆ ಒತ್ತಡ ತಂದು ಸಭೆಯನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ನಾವು ತಾ.ಪಂ ಕಛೇರಿ ಎದುರು ದರಣಿ ಕೂರುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಆನಂದಿ ಲಿಂಗರಾಜ್ ಸಭೆಯಿಂದ ಹೊರನಡೆದರು,
ನಂತರ ಮಧ್ಯಾಹ್ನ 2:15 ಗಂಟೆಗೆ ಶ್ರೀಮತಿ ಆನಂದಿ ಲಿಂಗರಾಜ್ ಮತ್ತು ಶ್ರೀಮತಿ ಹೇಮ ರಾಜಪ್ಪ ರವರು ಮತ್ತೊಬ್ಬ ಕಾಂಗ್ರೆಸ್ ಪಕ್ಷದ ಸದಸ್ಯೆಯಾದ ಶ್ರೀಮತಿ ಸವಿತಾ ದೇವರಾಜ್ ರವರೊಂದಿಗೆ ಪುನ: ಸಬೆಗೆ ಹಾಜರಾಗಿ ಈ 3 ಜನ ಸದಸ್ಯರು ಸೇರಿ ಈ ಸಭೆಯು ನಡೆಯುವ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗಳು ತಮಗೆ ಸರಿಯಾದ ಮಾಹಿತಿ ನೀಡಿರುವುದಿಲ್ಲ ಎಂದು ಆರೋಪಿಸಿ ಈ ಬಗ್ಗೆ ನಮಗೆ ಸಮಜಾಯಿಸಿ ನೀಡಬೇಕು ಆಗ್ರಹಿಸಿದರು. ನಂತರ ಮಧ್ಯಾಹ್ನ 2:30 ಗಂಟೆಗೆ ಸಭೆ ಮುಕ್ತಾಯವಾದ ಮೇಲೆ ಸಭಾ ನಡಾವಳಿ ಪುಸ್ತಕಕ್ಕೆ ಸಹಿ ಹಾಕದೆ ಹೊರಬಂದು ತಾಲ್ಲೂಕು ಪಂಚಾಯಿತಿಯ ಮಾನ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಕಚೇರಿ ಮುಂಭಾಗ ಧರಣಿ ಕುಳಿತರು.
ನಂತರ ಸಭೆಯ ಸದಸ್ಯೆ ಅನಿತಾ ಕುಮಾರಿ ನೇತೃತ್ವದಲ್ಲಿ ಸಂಧಾನ ಸಭೆ ನಡೆದಿದೆ. ಇಒ ಪುಷ್ಪ ಎಂ ಕಮ್ಮಾರ್ ಸಭೆಯಿಂದ ಹೊರ ಕಳುಹಿಸುವ ಪ್ರಕ್ರಿಯೆ ಕುರಿತು 7 ದಿನ ಕಾಲಾವಕಾಶ ತೆಗೆದುಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
Tags
ಶಿವಮೊಗ್ಗ