ಜಾವಗಲ್ ಪಟ್ಟಣದ ಪ್ರಸಿದ್ಧ ದರ್ಗಾ ಶುಕ್ರವಾರದಿಂದ ಸಾರ್ವಜನಿಕ ದರ್ಶನ

ಜಾವಗಲ್: ಪಟ್ಟಣದ ಪ್ರಸಿದ್ಧ ದರ್ಗಾ ಶುಕ್ರವಾರದಿಂದ ಸಾರ್ವಜನಿಕ ದರ್ಶನಕ್ಕೆ ತೆರೆಯಲಾಗಿದೆ ಎಂದು ದರ್ಗಾ ವ್ಯವಸ್ಥಾಪಕ ದಾದಾಪೀರ್ ತಿಳಿಸಿದರು.
   ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ 5ತಿಂಗಳಿಂದ ಕೋವಿಡ್ 19ಕಾರಣದಿಂದ ದರ್ಗಾ ಗೆ ಸಾರ್ವಜನಿಕ ಪ್ರವೇಶ ಇರಲಿಲ್ಲ. ಇದೇ ಸೆ.11ರ ಶುಕ್ರವಾರ ರಿಂದ ಬೆಳಿಗ್ಗೆ 06ಗಂಟೆಯಿಂದ ಸಂಜೆ 07 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸಿಂಗ್, ಮಾಡಲಾಗುವುದು. ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು, ಅಂತರವನ್ನು ಕಾಪಾಡಿಕೊಂಡು ಬರಬೇಕು ಎಂದರು.

Post a Comment

Previous Post Next Post