ಸಂಜನಾ, ರಾಗಿಣಿ ಬೆಂಬಲಕ್ಕೆ ಬಂದ ನಟಿ ಶೃತಿ ಹರಿಹರನ್


ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿ ಈ ಇಬ್ಬರೂ ನಟಿಯರು ಮೂವರು ಮಹಿಳಾ ಪೊಲೀಸರ ಜೊತೆ ಸಾಂತ್ವನ ಕೇಂದ್ರದಲ್ಲಿ ಇರುವ ವ್ಯವಸ್ಥೆ ಮಾಡಿದ್ದರು. ಈಗ ರಾಗಿಣಿ ಹಾಗೂ ಸಂಜನಾ ಅವರ ಬೆಂಬಲಕ್ಕೆ ನಟಿ ಪಾರುಲ್ ಯಾದವ್ ಹಾಗೂ ಶ್ರುತಿ ಹರಿಹರನ್ ಬಂದಿದ್ದಾರೆ.ಭಾರತದಲ್ಲಿ ಡ್ರಗ್ ಮಾಫಿಯಾ ಜೊತೆ ಸಂಬಂಧ ಹೊಂದಿರುವವರು ಕೇವಲ ಈ ಮೂವರು ಮಹಿಳೆಯರು ಮಾತ್ರವೇನಾ..? ಬೇರೆ ಯಾರೂ ಇಲ್ಲವಾ..? ಕಾರ್ಪೊರೇಟ್​ ಕಂಪನಿಯಲ್ಲಿರುವವರು, ಉದ್ಯಮಿಗಳು, ಕ್ರೀಡಾಪಟುಗಳು ಅಷ್ಟೇ ಯಾಕೆ, ಯಾವ ನಟರೂ ಡ್ರಗ್ ಸೇವಿಸಿಲ್ಲ ಹಾಗೂ ಸರಬರಾಜು ಮಾಡಿಲ್ಲವಾ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ ಪಾರುಲ್​ ಹಾಗೂ ಶ್ರುತಿ ಹರಿಹರನ್​ಈ ವಿಷಯದಲ್ಲಿ ಲಿಂಗ ತಾರತಮ್ಯ ಆಗಿಲ್ಲ ಎಂದು ಖುಷಿ ಪಡಬೇಕಾ ಅಥವಾ ಹುಡುಗಿಯರನ್ನು ಎಷ್ಟು ಸರಳವಾಗಿ ಸಂಕಷ್ಟಕ್ಕೆ ಸಿಲುಕಿಸಬಹುದಲ್ಲ ಅಂತ ಅಳಬೇಕಾ? ಎಂದು ನಟಿ ಪಾರುಲ್ ಯಾದವ್ ಪ್ರಶ್ನಿಸಿದ್ದಾರೆ. ಪಾರುಲ್ ಅವರ ಈ ಪೋಸ್ಟ್ ಅನ್ನು ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಹಂಚಿಕೊಂಡಿರುವ ಶ್ರುತಿ ಹರಿಹನ್​, ನನ್ನದೂ ಇದೇ ಆಲೋಚನೆ ಎಂದು ಬೆಂಬಲಿಸಿದ್ದಾರೆ.

Post a Comment

Previous Post Next Post