ಬಣಕಲ್ ಕೊಟ್ಟಿಗೆಹಾರದಲ್ಲಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

ಕೊಟ್ಟಿಗೆಹಾರ:ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಬಂದ್‍ಗೆ ಸೋಮವಾರ ಬಣಕಲ್ ಕೊಟ್ಟಿಗೆಹಾರ ಸುತ್ತಮುತ್ತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಣಕಲ್ ಕೊಟ್ಟಿಗೆಹಾರದಲ್ಲಿ ಕೆಲ ಅಂಗಡಿ ಮುಂಗಟ್ಟುಗಳು ಮುಚ್ಚಿ ಬಂದ್‍ಗೆ ಬೆಂಬಲ ಸೂಚಿಸಿದ್ದರೆ ಬಹುತೇಕ ಅಂಗಡಿಗಳು ತೆರೆದೆ ಇದ್ದವು. ಬಣಕಲ್‍ನಲ್ಲಿ ಸಂತೆಯ ದಿನವಾದ ಸೋಮವಾರ ಸಂತೆ ಸುಗಮವಾಗಿ ನಡೆಯಿತು. 


ಹೋಟೆಲ್, ಪೆಟ್ರೋಲ್ ಬಂಕ್, ಮೆಡಿಕಲ್ ಅಂಗಡಿ ಸೇರಿದಂತೆ ಬಹುತೇಕ ಅಂಗಡಿಗಳು ತೆರೆದಿದ್ದವು. ಆಟೋ ಜೀಪ್ ಸರ್ಕಾರಿ ಬಸ್ ಸಂಚಾರ ಎಂದಿನಂತಿತ್ತು. ಖಾಸಗಿ ಬಸ್ ಸಂಚಾರ ಇರಲಿಲ್ಲ.

ಬಣಕಲ್‍ನಲ್ಲಿ ರೈತ ಸಂಘಟನೆಗಳು ಸೋಮವಾರ ಬೆಳಿಗ್ಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಮನವಿ ಮಾಡಿಕೊಂಡಿದ್ದು ಬಣಕಲ್‍ನ ವರ್ತಕರು ಕೆಲ ಗಂಟೆಗಳ ಕಾಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಾಂಕೇತಿಕವಾಗಿ ಬಂದ್ ಆಚರಿಸಿದರು. ರೈತ ಸಂಘಟನೆಗಳು  ವರ್ತಕರಿಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಸೂಚಿಸಿÀದಾಗ ಸ್ಥಳದಲ್ಲೆ ಇದ್ದ ಪೊಲೀಸರು ವರ್ತಕರು ಸ್ವಯಂ ಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಿ. ಒತ್ತಾಯಪೂರ್ವಕವಾಗಿ ಮುಚ್ಚಿಸಬೇಡಿ ಎಂದು ಸೂಚಿಸಿದರು. ನಂತರ ಬಣಕಲ್‍ನಲ್ಲಿ ವರ್ತಕರು ಕೆಲ ಗಂಟೆಗಳ ಕಾಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‍ಗೆ ಸಾಂಕೇತಿಕ ಬೆಂಬಲ ಸೂಚಿಸಿದರು.

ಕೊಟ್ಟಿಗೆಹಾರದಲ್ಲಿ ರೈತ ಸಂಘಟನೆಗಳು ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಕೆಲ ವರ್ತಕರಿಗೆ ಸೂಚಿಸಿದಾಗ ರೈತ ಸಂಘಟನೆ ಮತ್ತು ವರ್ತಕರ ನಡುವೆ ಮಾತಿನ ಚಕಮಕಿ ನಡೆಯಿತು. ರೈತ ವಿರೋದ ಕಾಯ್ದೆ ರೈತರಿಗೆ ಮಾತ್ರ ಸಂಬಂದಿಸಿದಲ್ಲ. ರೈತರು ಬೆಳೆದರೆ ಮಾತ್ರ ವರ್ತಕರಿಗೆ ಉದ್ಯೋಗ. ವರ್ತಕರು ಈ ಬಂದ್‍ಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು. ಆದರೂ ಕೆಲ ಅಂಡಗಿ ಮುಂಗಟ್ಟುಗಳನ್ನು ಕೆಲ ವರ್ತಕರು ಮುಚ್ಚಿದರೆ ಮತ್ತೆ ಕೆಲವರು ಅಂಗಡಿ ತೆರೆದು ವ್ಯಾಪಾರ ಮುಂದುವರಿಸಿದರು.

ಕೊಟ್ಟಿಗೆಹಾರದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪುಟ್ಟಸ್ವಾಮೆಗೌಡ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ದೇಶಾದ್ಯಂತ ಹೋರಾಟ ಪ್ರಾರಂಭವಾಗಿದೆ. ರೈತ ವಿರೋಧಿಯಾಧ ಸರ್ಕಾರದ ದೋರಣೆಯಿಂದಾಗಿ ದೇಶ ಅರಾಜಕತೆಯತ್ತ ಸಾಗುತ್ತಿದೆ. ಆಡಳಿತವೆ ನಶಿಸಿ ಹೋಗುವಂತಹ ಸಂದರ್ಭಗಳು ಎದುರಾಗಬಹುದು. ಸರ್ಕಾರಕ್ಕೆ ರೈತರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ರೈತ ವಿರೋಧಿ ಭೂಸುಧಾರಣಾ ಕಾಯ್ದೆಯನ್ನು ಬದಲಾವಣೆ ಮಾಡಲಿ ಎಂದರು.

ಈ ಸಂದರ್ಭದಲ್ಲಿ  ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ್, ರಾಜ್ಯ ಮಹಿಳಾ ಉಪಾಧ್ಯಕ್ಷೆ ವನಶ್ರೀಲಕ್ಷ್ಮಣಗೌಡ, ತಾಲ್ಲೂಕು ಕಾರ್ಯದರ್ಶಿ ನಾಗೇಶ್, ತಾಲ್ಲೂಕು ರೈತ ಮುಖಂಡ ಗಣೇಶ್, ತಾಲ್ಲೂಕು ಮಹಿಳಾ ಅಧ್ಯಕ್ಷೆ ಪ್ರಜ್ವಲ, ಮಹಿಳಾ ಉಪಾಧ್ಯಕ್ಷೆ ಶಕುಂತಲಾ ಮುಂತಾದವರು ಇದ್ದರು.


Post a Comment

Previous Post Next Post