ಆಕೆ ವರ್ಷಗಳ ಹಿಂದೆ ಕನ್ನಡದ ಪ್ರಸಿದ್ಧ ವಾಹಿನಿ ಝೀ ಕನ್ನಡದ ಕನ್ನಡ ಕಣ್ಮಣಿ ಮೂಲಕ ಅಸಂಖ್ಯಾತ ಕರುನಾಡಿಗರ ಮ ನ ಗೆದ್ದ ಅಪ್ಪಟ್ಟ ಕುಂದ ನಾಡಿನ ಪ್ರತಿಭೆ.ತನಗೆ ಸಿಕ್ಕ ಅವಕಾಶ ಸದುಪಯೋಗಿಕೊಂಡ ಆಕೆ ಮತ್ತೆ ಹಿಂದಿರುಗಿ ನೋಡಲೇ ಇಲ್ಲ.ಯಶಸ್ಸಿನ ಒಂದೊಂದೇ ಮೆಟ್ಟಿಲು ಹತ್ತಿ ಇಂದು ಅತೀ ಚಿಕ್ಕ ವಯಸ್ಸಿನಲ್ಲೇ ಕರು ನಾಡಿನೆಲ್ಲೆಡೆ ತನ್ನ ಕೀರ್ತಿ ಹೆಚ್ಚಿಸಿಕೊಂಡಿದ್ದಾಳೆ ಈ ಪ್ರತಿಭೆ. ಈಕೆ ಮತ್ತಾರೂ ಅಲ್ಲ,ಕನ್ನಡದ ಕಣ್ಮಣಿಯಾಗಲು ಹೊರಟಿರುವ ಕುಂದಾಪುರದ ಕಣ್ಮಣಿ ಎಂದು ಮಾತು ಆರಂಭಿಸಿ ಕನ್ನಡಿಗರ ಕಣ್ಮಣಿಯಾದ ಪ್ರತಿಭೆ ಸಮೃದ್ಧಿ ಕುಂದಾಪುರ
ಮುಗ್ದ ಮಾತಿನ ಪೋರಿ ಈ ಹುಡುಗಿ. ಚಿಕ್ಕದಿನಿಂದಲೇ ಆಕೆಗೆ ಭಾಷಣ, ನಿರೂಪಣೆ, ಯಕ್ಷಗಾನಗಳಲ್ಲಿ ವಿಪರೀತ ಆಸಕ್ತಿ. ಆಕೆಯ ಪ್ರತಿಭೆಯನ್ನು ನೋಡಿದ ಆಕೆಯ ಶಿಕ್ಷಕರು ಆಕೆಗೆ ನಾಲ್ಕುವರೆ ವಯಸ್ಸಿನಲ್ಲಿನೆ ನಿರೂಪಣೆಗೆ ಅವಕಾಶ ಕೊಟ್ಟಿದ್ದರು. ಜೀ ಕನ್ನಡ ವಾಹಿನಿಯ ಕನ್ನಡ ಕಣ್ಮಣಿ ಶೋ ಮೂಲಕ ಕಲಾ ಕ್ಷೇತ್ರಕ್ಕೆ ಕಾಲಿಟ್ಟವಳು ಸಮೃದ್ಧಿ. ಇಂದು ಕನ್ನಡದ ಹೆಸರಾಂತ ನಿರ್ದೇಶಕರ ಸಿನಿಮಾಗಳಲ್ಲಿ ನಟನೆ ಮಾಡಿದ್ದಾಳೆ.
ಕುಂದಾಪುರ ತಾಲೂಕಿನ ಶ್ರೀಧರ್ ಮೊಗವೀರ ಮತ್ತು ಭಾರತಿ ಮೊಗವೀರ ಅವರ ಪ್ರಥಮ ಪುತ್ರಿ ಸಮೃದ್ಧಿ. ಹೆಸರಿಗೆ ತಕ್ಕಂತೆ ಸಮೃದ್ಧವಾದ ಪ್ರತಿಭೆ ಹೊಂದಿದ್ದಾಳೆ ಈ ಕುವರಿ. ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ವಿವಿಧ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಪ್ರಶಸ್ತಿಗಳನ್ನು ಗೆದಿದ್ದಾಳೆ.ಇತ್ತಿಚೆಗೆ ಮುಕ್ತ ವಾಹಿನಿ ಆಯೋಜಿಸಿದ್ದ ಕೃಷ್ನ ವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದ್ದಾಳೆ ಈಕೆ .. ಭಾಷಣ, ನಿರೂಪಣೆ, ಯಕ್ಷಗಾನ, ಅಭಿನಯ,ನೃತ್ಯ ಇವು ಸಮೃದ್ಧಿಯ ಹವ್ಯಾಸಗಳು. ಯಕ್ಷಗಾನದಲ್ಲಿ ಯಕ್ಷ ಪ್ರಶಸ್ತಿ ಪಡೆದಿರುವ ಈಕೆ ಪ್ರಸ್ತುತ ತೆಕ್ಕಟ್ಟೆಯ ವಿಶ್ವ ವಿನಾಯಕ ಸ್ಕೂಲ್ ನಲ್ಲಿ 4ನೆ ತರಗತಿ ಓದುತ್ತಿದ್ದಾಳೆ.
ಜೀ ವಾಹಿನಿ ಯ ಕನ್ನಡದ ಕಣ್ಮಣಿಯಲ್ಲಿ ತನ್ನ ಪ್ರತಿಭೆಯ ಮೂಲಕ ತೀರ್ಪುಗಾರರು, ಪ್ರೇಕ್ಷಕರ ಮನ ಗೆದ್ದ ಹುಡುಗಿ ಇವಳು. ಕನ್ನಡದ ಕಣ್ಮಣಿಯಲ್ಲಿ ಸೆಕೆಂಡ್ ರನ್ನರ್ ಆಫ್ ಆದ ಈಕೆಗೆ ನಟನ ಅವಕಾಶಗಳು ಅರಸಿ ಬಂದವು. ಸಮೃದ್ಧಿ ಹೆಸರಾಂತ ನಿರ್ದೇಶಕ ಪಿ. ಶೇಷಾದ್ರಿ ಅವರ ಮುಕಜ್ಜಿಯ ಕನಸು, ರವಿ ಬಸ್ರುರು ಅವರ ಗಿರ್ಮೀಟ್, ಶ್ರೀಧರ್ ಉಡುಪ ರವರ ಮೊಡ್ರೆನ್ ಮಹಾಭಾರತ ಸಿನಿಮಾಗಳಲ್ಲಿ ನಟಿಸಿದ್ದಾಳೆ. ಸಮೃದ್ಧಿಗೆ ಈಗಾಗಲೇ ಹತ್ತು ಹಲವಾರು ಪ್ರಶಸ್ತಿಗಳು ಸನ್ಮಾನಗಳು ಅರಸಿ ಬಂದಿವೆ.ಈ ಕೊರೊನಾ ಕಾಲದ ಶಾಲಾ ರಜಾ ದಿನಗಳು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡಿದ್ದಾಳೆ ಸಮೃದ್ಧಿ.
“ವಲ್ರ್ಡ್ ಫ್ಯಾಮಿಲಿ ಡೇ”ಸೆಲೆಬ್ರೇಷನ್ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,ತುಳುವ ಸೊಸೈಟಿಯವರ ನ್ಯಾಷನಲ್ ಲೆವೆಲ್ ನೃತ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಕುಂದಾಪುರ ಕನ್ನಡ ದಿನದ ಅಂಗವಾಗಿ ಕೋಟ ಕಾರಂತ ಥೀಮ್ ಪಾರ್ಕ್ ಅವರು ನಡೆಸಿದ ಕುಂದಾಪುರ ಕನ್ನಡ ಮಾತನಾಡಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ,ಕಥೆ ಹೇಳುವ ಸ್ಪರ್ದೆಯಲ್ಲಿ ಮೊದಲ ಸ್ಥಾನ, ಮುಕ್ತ ವಾಹಿನಿ ಆಯೋಜಿಸಿದ್ದ ಕೃಷ್ನ ವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,ಜೆಸಿಐ ಬ್ರಹ್ಮಾವರ ಆಯೋಜಿಸಿದ್ದ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹೀಗೆ ಸಾಲು ಸಾಲು ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾಳೆ ಈಕೆ.ಇಷ್ಟು ಮಾತ್ರವಲ್ಲದೇ ಎರಡು ಕಿರು ಚಿತ್ರಗಳಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾಳೆ ಈ ಪುಟ್ಟ ಪೋರಿ
ಕಲಿಕೆಯಲ್ಲೂ ಸದಾ ಮುಂದೆ ಇರುವ ಸಮೃದ್ಧಿಗೆ ತನ್ನ ಪ್ರತಿಭೆಯನ್ನು ತೋರಿಸಲು ಹೆಚ್ಚಿನ ಅವಕಾಶಗಳು ಸಿಗಲಿ. ಈ ಪ್ರತಿಭೆ ಇನ್ನಷ್ಟು ಅಪಾರ ಸಾಧನೆ ಮಾಡಿ, ಜನರ ಪ್ರೀತಿ ಪಡೆಯಲಿ ಎಂದು ಆಶಿಸೋಣ.
- ನವ್ಯಶ್ರೀ ಶೆಟ್ಟಿ
Tags
ಲೇಖನ