ಶ್ರವಣಬೆಳಗೊಳ: ಹೋಬಳಿ ಕುಂಬೇನಹಳ್ಳಿ ಗ್ರಾಮದ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ ಅಂದಾಜು ₹ 25 ಸಾವಿರ ಮೌಲ್ಯದ 1.170 ಕೆ.ಜಿ ಗಾಂಜಾ ಗಿಡವನ್ನು ಸೋಮವಾರ ಪೊಲೀಸರು ದಾಳಿ ನಡೆಸಿ ವಶ ಪಡಿಸಿಕೊಂಡು ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.
ಗ್ರಾಮದ ಸುಮಿತ್ರಾ (56 ವರ್ಷ) ಮತ್ತು ಅವರ ಪುತ್ರ ನವೀನ (34 ವರ್ಷ) ಎಂಬುವರ ಜಮೀನಿನಲ್ಲಿ ಗಾಂಜಾ ಗಿಡ ಬೆಳೆಯಲಾಗಿತ್ತು. ಆರೋಪಿ ಸುಮಿತ್ರಾ ಅವರನ್ನು ಬಂಧಿಸಲಾಗಿದ್ದು, ನವೀನ ತಲೆ ಮರೆಸಿಕೊಂಡಿದ್ದಾನೆ. ಖಚಿತ ಮಾಹಿತಿ ಮೇರೆಗೆ ಸಿಪಿಐ ಬಿ.ಜಿ.ಕುಮಾರ್, ಪಿಎಸ್‌ಐ ಶ್ರೀನಿವಾಸ್, ಹೇಮಾವತಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಉಮೇಶ್ ಮತ್ತು ಎಎಸ್‌ಐ ಉಮೇಶ್, ಸಿಬ್ಬಂದಿ ಮಹೇಶ್, ರಾಮಕೃಷ್ಣ, ವಾಣಿ, ಪ್ರದೀಪಕುಮಾರ್, ಲೋಕೇಶ್, ಶಿವಕುಮಾರ್, ಅನಿಲ್ ಕುಮಾರ್ ದಾಳಿಯಲ್ಲಿ ಭಾಗವಹಿಸಿದ್ದರು.
Tags
ಚನ್ನರಾಯಪಟ್ಟಣ