ಹಾಸನ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸರಕಾರದಿಂದ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶರಾದ ಸಿ.ಕೆ. ಬಸವರಾಜು ತಿಳಿಸಿದರು.
ನಗರದ ತಣ್ಣೀರುಹಳ್ಳ ರಸ್ತೆ ಬಳಿ ಇರುವ ಯೋಜನಾ ಕಛೇರಿ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಹಾಸನಾಂಬ ಲಯನ್ಸ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಮದ್ಯಾಹ್ನ ಏರ್ಪಡಿಸಲಾಗಿದ್ದ ಜ್ಞಾನ ವಿಕಾಸ ಸರಜನಶೀಲ ಕಾರ್ಯಕ್ರಮದಡಿಯಲ್ಲಿ ಸರಕಾರದ ವಿವಿಧ ಸೌಲಭ್ಯಗಳ ವಿತರಣೆ ಮತ್ತು ನೊಂದಾವಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೃದ್ಯಾಪ ವೇತನ, ವಿಧವ ವೇತನ, ಅಂಗವಿಕಲರಿಗೆ, ಬಡವರಿಗೆ ಸೌಲಭ್ಯ ಹೊದಗಿಸುವಂತಹ ಹಲವಾರು ಕಾರ್ಯಕ್ರಮಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರಿಗೆ ನಮುಸ್ಕರಿಸುವುದಾಗಿ ಹೇಳಿದರು. ಈಗ ಕೊರೋನಾ ಎಂಬ ಮಾರಾಣಂತಿಕ ರೋಗ ಇದ್ದರೂ ಸಹ ಸಮಾಜ ಸೇವೆಯಂತಹ ಕಾರ್ಯಕ್ರಮದಲ್ಲಿ ಟ್ರಸ್ಟ್ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಈ ಸಂಸ್ಥೆ ಮೂಲಕ ಸ್ತ್ರೀಶಕ್ತಿ ಸಂಘಗಳ ರಚನೆಯಿಂದ ಹೆಣ್ಣು ಮಕ್ಕಳು ಯಶಸ್ವಿಯ ಸ್ವಾಲಂಬಿಯಾಗಿ ಬದುಕುತ್ತಿರುವುದಾಗಿ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನ ಪ್ರಾದೇಶಿಕ ನಿರ್ದೇಶಕರಾದ ಪಿ. ಗಂಗಾಧರರೈ ರವರು ಮಾತನಾಡುತ್ತಾ, ಒಂದು ಮನೆ ಮತ್ತು ಸಮಾಜ ಪ್ರಗತಿಯಾಗಬೇಕಾದರೇ ಹೆಣ್ಣು ಬೆಳಕಾಗಬೇಕು. ಸ್ವ-ಉದ್ಯೋಗ ನೀಡುವ ಮೂಲಕ ಮಹಿಳೆಯರು ಕೂಡ ದುಡಿದು ಬದುಕ ಬಹುದು ಎಂಬುದನ್ನು ನಮ್ಮ ಸಂಸ್ಥೆ ಅನೇಕ ಕಾರ್ಯಕ್ರಮ ನಡೆಸುತ್ತಿದೆ ಎಂದರು. ಇದಲ್ಲದೇ ಅನೇಕ ಕೆರೆಗಳ ಪುನಶ್ಚೇತನ, ಶುದ್ಧ ಕುಡಿಯುವ ನೀರು, ವಿಕಲ ಚೇತನರಿಗೆ ಸೈಕಲ್, ಹೀಗೆ ಹತ್ತು ಹಲವಾರು ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷರಾದ ಜೆ.ಪಿ. ಶೇಖರ್ ಮಾತನಾಡಿ, ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಹೆಸರಿನಲ್ಲಿ ಯಾವ ಪ್ರತಿಫಲ ಅಪೇಕ್ಷೆ ಪಡದೇ ಅನೇಕ ಯೋಜನೆಯನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ. ಶ್ರೀಕ್ಷೇತ್ರದಲ್ಲಿ ಅನ್ನದಾನ ಒಂದೆ ಮಾಡದೇ ಸಮಾಜ ಸೇವೆಯಂತಹ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎಂದು ಇದೆ ವೇಳೆ ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ವೀಲ್ ಛೇರ್, ಆಯುಷ್ಯಮಾನ್ ಕಾರ್ಡ್ ಇತರೆಗಳನ್ನು ವಿತರಿಸಲಾಯಿತು.
ಇದೆ ವೇಳೆ ಹಾಸನ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿ ಯು.ಜೆ. ಮಲ್ಲಿಕಾರ್ಜುನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನ ನಿರ್ದೇಶಕ ಡಿ. ಜಯರಾಮ್, ಯೋಜನಾಧಿಕಾರಿ ಪುರುಷೋತ್ತಮ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಬಿ.ಸಿ. ಲೇಪಾಕ್ಷಿ ಇತರರು ಪಾಲ್ಗೊಂಡಿದ್ದರು.