ಲಯನ್ಸ್ ಸೇವಾಸಂಸ್ಥೆಯಿಂದ ಶಿಕ್ಷಕರಿಗೆ ಸನ್ಮಾನ

ಹಾಸನ: ಕೊರೋನಾ ಎಂಬ ಮಹಾಮಾರಿ ಪ್ರಪಂಚದಾದ್ಯಂತ ಹರಡಿದ್ದು, ಈ ವೈರಸ್ ಬಗ್ಗೆ ಎಚ್ಚರದಿಂದ ಇರಬೇಕೆ ವರತು ಭಯಪಡಬಾರದು ಎಂದು ಲಯನ್ಸ್ ಸೇವಾಸಂಸ್ಥೆಯ ವಲಯ ಅಧ್ಯಕ್ಷರಾದ ವಿ. ಮಹೇಶ್ ತಿಳಿಸಿದರು.



        ನಗರದ ಕುವೆಂಪು ರಸ್ತೆ, ಹುಡಾ ಕಛೇರಿ ಎದುರು ಇರುವ ಲಯನ್ಸ್ ಸೇವಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಐದು ಕ್ಲಬ್ ಗಳ ಸಮಾವೇಶದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಬೇಲೂರು ತಾಲೂಕಿನ ಶಿಕ್ಷಕರಾದ ಟಿ.ವಿ. ತಮ್ಮಣ್ಣಗೌಡ ಮತ್ತು ಅಟ್ಟವರ ಹೊಸಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲಾ ಮುಖ್ಯೊಪಾಧ್ಯಯ ನಾರಾಯಣಗೌಡ ಇಬ್ಬರು ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದ ನಂತರ ಉದ್ದೇಶಿಸಿ ಮಾತನಾಡಿದ ಅವರು, ಲಯನ್ಸ್ ಕ್ಲಬ್ ಗೆ ಬಂದರೇ ಸೇವೆ ಮತ್ತು ಶಿಸ್ತುಗಳನ್ನು ಮೈಗೂಡಿಸಿಕೊಳ್ಳಲು ಸಹಕಾರಿ ಎಂಬುದನ್ನು ನಾನೇ ಸಾಕ್ಷಿಯಾಗಿರುವುದಾಗಿ ಹೇಳಿದರು. ಕೋವಿಡ್-19 ಸಮಯದಲ್ಲಿ ವೈದ್ಯನಾಗಿ ಚಿಕಿತ್ಸೆ ನೀಡಿ 30 ಶವಗಳ ಅಂತ್ಯಸಂಸ್ಕಾರ ಮಾಡಿದ್ದೇನೆ. ಕೊರೋನಾದ ಮುನ್ಸೂಚನೆಗಳು ನಿಮ್ಮಲ್ಲಿ ಗೋಚರವಾದಾಗ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳುವುದನ್ನು ಮರೆಯಬೇಡಿ ಎಂದರು. ಖಾಸಗಿ ಆಸ್ಪತ್ರೆಗೆ ಹೋದರೇ 5 ದಿವಸಕ್ಕೆ ಕನಿಷ್ಟ 2 ಲಕ್ಷ ಭರಿಸಬೇಕು. ಸಾರ್ವಜನಿಕರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಮರೆಯಬಾರದು ಎಂದು ಇದೆ ವೇಳೆ ಸಲಹೆ ನೀಡಿದರು.

      ಬೇಲೂರು ತಾಲೂಕಿನ ಶಿಕ್ಷಕರಾದ ಟಿ.ವಿ. ತಮ್ಮಣ್ಣಗೌಡ ಮತ್ತು ಅಟ್ಟವರ ಹೊಸಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲಾ ಮುಖ್ಯೊಪಾಧ್ಯಯ ನಾರಾಯಣಗೌಡ ಮಾತನಾಡಿ, ಸನ್ಮಾನ ಎಂಬುದು ಅರ್ಜಿ ಹಾಕಿ ಪಡೆಯುವಂತದಲ್ಲ. ತಾನಾಗೆ ಸಿಗಬೇಕಾಗಿರುವ ಗೌರವವಾಗಿದೆ. ಆ ನಿಟ್ಟಿನಲ್ಲಿ ನಾನು ಎಂದು ಇಷ್ಟಪಟ್ಟು ಸನ್ಮಾನ ಸ್ವೀಕರಿಸುವ ಪ್ರಶ್ನೆಯೇ ಇಲ್ಲ ಎಂದರು. ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಟ ಗುರು ಎಂದರೇ ಶಿಕ್ಷಕ. ಆ ನಿಟ್ಟಿನಲ್ಲಿ ಸಮಾಜಕ್ಕೆ ಏನಾದರೂ ಸೇವೆ ಮಾಡಲೇಬೇಕು ಎಂಬ ಆಕಾಂಕ್ಷೆಗಳನ್ನು ಹೊಂದಿರುವುದಾಗಿ ತಿಳಿಸಿದರು.

      ಇಂಜಿನಿಯರ್ಸ್ ದಿನಾಚರಣೆ ಅಂಗವಾಗಿ ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿರುವ ಇಂಜಿನಿಯರ್ಸ್ ಸದಸ್ಯರನ್ನು ಸನ್ಮಾನಿಸಿ ಗೌರವಿಸಿದರು.

    ಇದೆ ವೇಳೆ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಸ್.ಪಿ. ಪ್ರಕಾಶ್, ನಿಕಟಪೂರ್ವ ಅಧ್ಯಕ್ಷ ಹೆಚ್.ಆರ್. ಚಂದ್ರೇಗೌಡ, ಕಾರ್ಯದರ್ಶಿ ಹೆಚ್.ಕೆ. ನಾಗೇಶ್, ಖಜಾಂಚಿ ಐ.ಜಿ. ರಮೇಶ್, ವಲಯ ಸಲಹೆಗಾರ ನಟೇಶ್ ಕುಮಾರ್, ಕ್ಲಬ್ ಸರ್ವಿಸ್ ಮುಖ್ಯಸ್ಥ ಹೆಚ್.ಎಸ್. ಆನಂದ್, ಕಮ್ಯೂನಿಟಿ ಛೇರ್ಮನ್ ಹೆಚ್.ಪಿ. ಅಶೋಕ್ ಕುಮಾರ್, ಕಮ್ಯೂನಿಟಿ ಛೇರ್ಮನ್ ಸಿ. ಶಿವಸ್ವಾಮಿ, ಎಸ್.ಪಿ. ಅನಂತರಾಜು, ಲೆಕ್ಕ ಪರಿಶೋದಕರಾದ ಹೆಚ್.ಟಿ. ಸುರೇಶ್, ವೆಂಕಟೇಗೌಡ, ರಮೇಶ್, ಭಗವಾನ್, ಲಿಯೋ ಕ್ಲಬ್ ನ ಜೀವನ್ ಹಾಗೂ ಇತರೆ ಕ್ಲಬ್ ನ ಅಧ್ಯಕ್ಷರು ಮತ್ತು ಸದಸ್ಯರು ಆಗಮಿಸಿದ್ದರು.


Post a Comment

Previous Post Next Post