ಆಲೂರು : ಶಿಕ್ಷಕರಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು , ಇಡೀ ದೇಶದ ಶಿಕ್ಷಕರಿಗೆ ಕೊಟ್ಟಂತಹ ಮರೆಯಲಾಗದ ಗೌರವ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ಸರ್ಕಾರಿ ನೂತನ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಇವರ ಸಂಯುಕ್ತಾಶ್ರಯದಲ್ಲಿ ಕೋವಿಡ್ - 19 ಹಿನ್ನೆಲೆಯಲ್ಲಿ ಸರಳವಾಗಿ ಆಯೋಜಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ.ರಾಧಾಕೃಷ್ಣನ್ ಅವರು ಒಬ್ಬ ನಿಜವಾದ ಶಿಕ್ಷಕ, ಪಂಡಿತರಾಗಿದ್ದರು.ಜ್ಞಾನದ ಕಲಿಕೆಗೆ ಅಂತ್ಯವೇ ಇಲ್ಲ ಬಡತನದಿಂದ ಬಂದ ಎಷ್ಟೋ ಮಹಾಪುರುಷರು ಶ್ರದ್ಧೆ ,ಆಸಕ್ತಿ ,ಶ್ರಮದ ಕಲಿಕೆಯಿಂದ ಉನ್ನತ ಸ್ಥಾನ ಪಡೆದಿರುವ , ರಾಧಾ ಕೃಷ್ಣನ್ ಸೇರಿದಂತೆ ಅಬ್ದುಲ್ ಕಲಾಂ ಸಾಕ್ಷಿಯಾಗಿದ್ದಾರೆ.ಕಲಿಯುವಂತಹ ವಿದ್ಯಾರ್ಥಿ ಇರುವವರೆಗೂ ಕಲಿಸುವಂತಹ ಶಿಕ್ಷಕ ಎಂದಿಗೂ ಅಜರಾಮರ ಅವರ ತತ್ವ ಆದರ್ಶಗಳು ಪ್ರತಿಯೊಬ್ಬರಿಗೂ ಮಾದರಿ ಎಂದ ಅವರು, ಆಲೂರು ಮತ್ತು ಸಕಲೇಶಪುರ ತಾಲ್ಲೂಕು ಇಡೀ ಜಿಲ್ಲೆಯಲ್ಲಿಯೇ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಪ್ರತಿ ವರ್ಷವೂ ಈ ಎರಡು ತಾಲೂಕುಗಳು ಪ್ರಥಮ ಸ್ಥಾನದಲ್ಲಿಯೇ ಮುಂದುವರಿಯುತ್ತಿರುವುದಕ್ಕೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳೇ ಕಾರಣಿಕರ್ತರಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿ ಶಿಕ್ಷಕ ವೃಂದವನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಎಪಿಎಂಸಿ ಅಧ್ಯಕ್ಷ ಕೆ.ಎಸ್. ಮಂಜೇಗೌಡ, ತಹಶೀಲ್ದಾರ್ ಶಿರೀನ್ ತಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಸುಜಾತ,ತಾಲ್ಲೂಕು ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ,ಬಿ ಆರ್ ಸಿ ಎಚ್.ಎನ್.ರಮೇಶ್,ಸೇರಿದಂತೆ ಶಿಕ್ಷಕರುಗಳು ಭಾಗವಹಿಸಿದ್ದರು.
Tags
ಆಲೂರು