ಹಾಸನ: ಜಿಲ್ಲೆಯಲ್ಲಿ ಭಾನುವಾರ ಕರೊನಾ ತ್ರಿಶತಕ ಬಾರಿಸಿದ್ದು ದಿನದಿಂದ ದಿನಕ್ಕೆ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಇದೆ. ಒಂದೇ ದಿನ ಗರಿಷ್ಠ 325 ಜನರಲ್ಲಿ ಕೋವಿಡ್-19 ದೃಢಪಟ್ಟಿದ್ದು 2:ಜನ ಮೃತಪಟ್ಟಿದ್ದಾರೆ.
ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 10040 ಕ್ಕೆ ಏರಿಕೆಯಾಗಿದ್ದು, 6579 ಜನ ಇಲ್ಲಿವರೆಗೆ ಡಿಸ್ಚಾರ್ಜ್ ಆಗಿದ್ದಾರೆ. 3242 ಸಕ್ರಿಯ ಪ್ರಕರಣಗಳಿದ್ದು, 52 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೊನಾದಿಂದ ಈ ತನಕ 219 ಜನ ಮೃತಪಟ್ಟಿದ್ದಾರೆ.
Tags
ಹಾಸನ