ಟ್ರಾನ್ಸ್‍ಫರ್ಮಾರ್ ಮತ್ತು ವಿದ್ಯುತ್ ಕಂಬ ಬದಲಾಯಿಸುವಂತೆ ಚೆಸ್ಕಾಂ ಅಧಿಕಾರಿಗಳಿಗೆ ಮನವಿ

ರಾಮನಾಥಪುರ;- ಬೆಟ್ಟಸೋಗೆ ಗ್ರಾಮದ ಶ್ರೀ ಮಲ್ಲೇಶ್ವರ ದೇವಸ್ಥಾನದ ಪಕ್ಕ ಸಮುದಾಯಭವನ ಇದ್ದು ಅದರ ಮೇಲೆ ವೈರುಗಳು ಇದ್ದು ಹಾಗೂ ಪಕ್ಕದಲ್ಲಿ ಟ್ರಾನ್ಸ್‍ಫರ್ಮಾರ್ ಮತ್ತು ವಿದ್ಯುತ್ ಕಂಬ ಬದಲಾಯಿಸುವಂತೆ ನಿವೃತ್ತ ಬಿ.ಡಿ.ಓ. ಬಿ.ಎನ್. ರಾಜಶೇಖರ್ ಮುಂತಾದವರು ಚೆಸ್ಕಾಂ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ರಾಮನಾಥಪುರ ಹೋಬಳಿ ಬೆಟ್ಟಸೋಗೆ ಗ್ರಾಮದ ದೇವಾಲಯದ ಪಕ್ಕ ದಾಸೋಹದ ಸಮುದಾಯದ ಭವನದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ದೇವಾಲಯದ ಪಕ್ಕ ಸಮುದಾಯ ಭವನವಿದ್ದು ಅದರ ಮೇಲೆ ವಿದ್ಯುತ್ ವೈರ್ ಹಾದು ಹೋಗಿದ್ದು ಮತ್ತು ಇದರ ಪಕ್ಕ ವಿದ್ಯುತ್ ಲೈನ್ ಹಾಗೂ ಟ್ರಾನ್ಸ್‍ಫರ್ಮಾರ್ ಇರುವ ಸ್ಥಳದಲ್ಲಿ ಗದ್ದೆ ಇದ್ದು, ಸಾರ್ವಜನಿಕರು ತಿರುಗಾಡುವ ಸ್ಥಳವಾಗಿದೆ .
    ಕೆ.ಇ.ಬಿ. ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಶ್ರೀಘವೇ ಟ್ರಾನ್ಸ್‍ಫರ್ಮಾರ್ ವಿದ್ಯುತ್ ಕಂಬಗಳನ್ನು ತಕ್ಷಣವೇ ಬದಲಾಯಿಸಬೇಕು ಎಂದು ಬೆಟ್ಟಸೋಗೆ ಗ್ರಾಮದ ಶ್ರೀ ಮಲ್ಲೇಶ್ವರಸ್ವಾಮಿ ದೇವಸ್ಥಾನದ ಸಮಿತಿ ಗೌರವಧ್ಯಕ್ಷ ಹಾಗೂ ನಿವೃತ್ತ ಬಿ.ಡಿ.ಒ. ಬಿ.ಎನ್. ರಾಜಶೇಖರ್, ಅಧ್ಯಕ್ಷ ಬಿ.ಪಿ. ವೀರೇಶ್, ಖಜಾಂಚಿ ಶಿವಮೂರ್ತಿ  ಮುಂತಾದವರು ಮನವಿ ಮಾಡಿದರು.

Post a Comment

Previous Post Next Post