ರಾಗಿಣಿ ನನ್ನ ಕನಸಿನ ರಾಣಿ ,ಅವಳಿಗಾಗಿ ನನ್ನ ಪ್ರಾಣ ಕೊಡಲು ಸಿದ್ದ ಎಂದ ಅಭಿಮಾನಿ

ಸ್ಯಾಂಡಲ್ವುಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಅವರು ಈಗಾಗಲೇ ಸಿಸಿಬಿ ಅವರ ವಿಚಾರಣೆ ನಂತರ, ಕೋರ್ಟ್ ಆದೇಶದಂತೆ ಜೈಲು ಸೇರಿದ್ದಾರೆ. ರಾಗಿಣಿ ಅವರು ಜೈಲು ಸೇರುತ್ತಿದ್ದ ಹಾಗೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಸುಧಾಕರ್ ಎಂಬಾತ ನಟಿ ರಾಗಿಣಿ ಅವರ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?. ಹೌದು ಸುಧಾಕರ್ ಹೇಳಿದ ಹಾಗೆ " ನಟಿ ರಾಗಿಣಿ ಅವರು ನನ್ನ ಪಾಲಿನ ದೇವತೆ, ನನ್ನ ಕನಸಿನ ರಾಣಿ, ಅವರಿಗಾಗಿ ಕೇವಲ ನಾನು ರಕ್ತ ಮಾತ್ರವಲ್ಲ ,ಇಡೀ ನನ್ನ ಪ್ರಾಣವನ್ನು ಕೊಡಲು ಸಿದ್ಧ. ಮತ್ತು ಈಗ ನಟಿ ರಾಗಿಣಿ ಅವರನ್ನು ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಜೈಲಿಗೆ ಹಾಕಿಸಿದ್ದಾರೆ.  ನಾನು ಅವರ ವಿರುದ್ಧ ಹೋರಾಟ ಮಾಡಿ ಅವರನ್ನು ಜೈಲಿಗೆ ಹಾಕಿಸಿ ಗಲ್ಲಿಗೇರಿಸುವ ಹಾಗೆ ಮಾಡುತ್ತೇನೆ ಅದೇ ನನ್ನ ಆಸೆ. ಮತ್ತು ನಾನೊಬ್ಬ ಆರ್ ಟಿ ಐ ಕಾರ್ಯಕರ್ತ ,ಸಾಮಾಜಿಕ ಕಾರ್ಯಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ಸಣ್ಣಪುಟ್ಟ ಸಹಾಯ ಮಾಡುತ್ತಾ ಬಂದಿದ್ದೇನೆ. ಆರ್ ಟಿ ಐ ಕಚೇರಿಯ  ಮೂಲಕ ,ರಾಜ್ಯದಲ್ಲಿ ಯಾರೆಲ್ಲಾ ಈ ಮಾದಕ ವಿಚಾರಕ್ಕೆ ಸಂಬಂಧಿಸಿದ್ದಾರೆ ಅವರನ್ನೆಲ್ಲ ಹಿಡಿದು ಒಳಗೆ ಹಾಕಿಸುವ ಪ್ರಯತ್ನ ಮಾಡುತ್ತೇನೆ " ಎನ್ನುವ ನಿಟ್ಟಿನಲ್ಲಿ ನಟಿ ರಾಗಿಣಿ ಅವರ ಅಪ್ಪಟ ಅಭಿಮಾನಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.. 



ಮತ್ತು ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದ್ದು, ರಾಗಿಣಿ ಅಭಿಮಾನಿಗಳು ಹೀಗೂ ಇದ್ದಾರೆಯೇ ಎಂದು ಚರ್ಚೆ ಮಾಡಲಾಗುತ್ತಿದೆ. . ವಿಡಿಯೋ ವೈರಲ್ ಆಗಿದ್ದಾದರೂ ಹೇಗೆ ಎಂಬುದು ನಿಮಗೂ ಗೊತ್ತಾಗುತ್ತದೆ ಧನ್ಯವಾದಗಳು..

Post a Comment

Previous Post Next Post