ಕೋವಿಡ್ ಗೆ ಭದ್ರಾವತಿ ಮಾಜಿ ಶಾಸಕ ಬಲಿ

ಕೋವಿಡ್ ಸೋಂಕಿಗೆ ಭದ್ರಾವತಿ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಅಪ್ಪಾಜಿಗೌಡ(69) ಸಾವನ್ನಪ್ಪಿದ್ದಾರೆ.

ಕಳೆದ ಮೂರುದಿನಗಳ ಹಿಂದಷ್ಟೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದ ಅಪ್ಪಾಜಿ ಗೌಡರಿಗೆ ಇಂದು ಉಸಿರಾಟದ ತೊಂದರೆ ಅತಿಹೆಚ್ಚು ಕಾಣಿಸಿಕೊಂಡಿದೆ.

ಕೋವಿಡ್-19 ನಿಂದಾಗಿ ಉಸಿರಾಟ ತೊಂದರೆ ಹೆಚ್ಚಾದ ಪರಿಣಾಮ ಅಪ್ಪಾಜಿಯವರನ್ನ  ಇಂದು ಸಂಜೆ 7 ಕ್ಕೆ ಮೆಟ್ರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೆಟ್ರೋದಲ್ಲಿಯೂ ಸಹ ಚಿಕಿತ್ಸೆಗೆ ಸ್ಪಂಧಿಸದ ಅಪ್ಪಾಜಿಯವರನ್ನ ಮೆಗ್ಗಾನ್ ಗೆ ದಾಖಲಿಸಲಾಗಿತ್ತು.

ಸುಮಾರು 10-30 ರ ಸಮಯದಲ್ಲಿ ಮೆಗ್ಗಾನ್  ಆಸ್ಪತ್ರೆಗೆ ದಾಖಲಿಸಿದ್ದರೂ ಸಹ ಚಿಕಿತ್ಸೆಗೆ ಸ್ಪಂಧಿಸದ ಅಪ್ಪಾಜಿ ದಾಖಲಾದ ಐದು ಹತ್ತು ನಿಮಿಷದಲ್ಲಿ ಸಾಬನ್ಬಪ್ಪಿರುವುದಾಗಿ ಮೂಲಗಳು ತಿಳಿಸಿವೆ.


Post a Comment

Previous Post Next Post