ಕಮಲ ಬಿಟ್ಟು ಕೈ ಹಿಡಿಯಲು ಹೊರಟ ರಾಗಿಣಿ ದ್ವಿವೇದಿ

ಕನ್ನಡದ ವೀರ ಮದಕರಿ, ಶಿವ, ಕೆಂಪೆಗೌಡ ಮುಂತಾದ ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಮನೆಮಾತಾದ ರಾಣಿಗಿ ದ್ವಿವೇದಿ ರಾಜಕೀಯದಲ್ಲೂ ಚವಾಪು ಮೂಡಿಸಲು ಹೊರಟಿದ್ದರು. ಕಳೆದ ವರ್ಷ ಎಪ್ರಿಲ್ ನಲ್ಲಿ ಬಿಜೆಪಿ ಸೇರಿ ತಮಗೆ ಯಾವುದಾದರೂ ಹುದ್ದೆ ಸಿಗುತ್ತದೆ ಎನ್ನುವ ಆಸೆ ಹೊಂದಿದ್ದ ರಾಗಿಣಿ ಬಿಜೆಪಿ ಪಕ್ಷದಲ್ಲಿ ನಿಷ್ಟರಾಗಿಯೇ ದುಡಿದಿದ್ದರುಕೆ ಆರ್ ಪೇಟೆ ಉಪ ಚುನಾವಣೆಯಲ್ಲಿ ನಾರಾಯಣ ಗೌಡರವರ ಪರವಾಗಿ ಪ್ರಚಾರ ಮಾಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೂ ಆಕೆಗೆ ಯಾವುದೇ ಸ್ಥಾನಮಾನದ ಭರವಸೆ ಸಿಗಲಿಲ್ಲ. ತಮ್ಮ ಚಿತ್ರರಂಗದ ಕೆಲವು ನಟಿಯರೇ ಒಳ್ಳೆಯ ಸ್ಥಾನದಲ್ಲಿ ಇದ್ದಾರೆ. ತಮಗಿನ್ನೂ ಯಾವುದೇ ಹುದ್ದೆ ಸಿಗಲಿಲ್ಲ ಎಂಬ ಕೊರಗು ಅವರಿಗಿತ್ತು.
ಈಗ ಅವರು ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷದ ಕಡೆ ಜಂಪ್ ಆಗಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದ ಈಶ್ವರ ಖಂಡ್ರೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ತಾವು ಲಾಕ್ಡೌನ್ ಸಮಯದಲ್ಲಿ ಮಾಡಿದ ಸಮಾಜ ಸೇವೆಯನ್ನೂ ಅವರಿಗೆ ಮನವರಿಕೆ ಮಾಡಿದ್ದಾರಂತೆ. ಅದಕ್ಕೆ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಖಂಡಿತಾ ಅಧಿಕಾರಕ್ಕೆ ಬರಲಿದೆ ಎಂಬ ಮಾತು ಇದೆ.ಹಾಗಾಗಿ ಅಲ್ಲಿ ತಮಗೆ ಒಳ್ಳೆಯ ಹುದ್ದೆ ಸಿಗಬಹುದು ಎಂಬ ಭರವಸೆ ಅವರಿಗಿರುವುದರಿಂದ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ರಾಗಿಣಿ.

Post a Comment

Previous Post Next Post