ರಾಜ್ಯದಲ್ಲಿ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ ಶಾಲೆ ಆರಂಭಿಸುವ ವಿಚಾರವಾಗಿ ಆತುರದ ನಿರ್ಧಾರ ಬೇಡ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.
ಹಾಸನದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಶಾಲಾ ಆರಂಭಿಸುವ ವಿಚಾರವಾಗಿ ಸೂಕ್ತವಾಗಿ ಪರಾಮರ್ಶೆ ನಡೆಸಿ ತೀರ್ಮಾನ ಕೈಗೊಳ್ಳಬೇಕು.
ಕೊರೋನಾ ಭಯ ಎಲ್ಲರಿಗೂ ಇದೆ, ಬಡಜನರ ಬಗ್ಗೆಯೂ ಸರ್ಕಾರ ಚಿಂತನೆ ಮಾಡಲಿ . ಮುಂಜಾಗ್ರತೆ ವಹಿಸದೆ ಯಾವುದೇ ತೀರ್ಮಾನ ಕೈಗೊಂಡರೆ ಅದು ದುಡುಕಿನ ನಿರ್ಧಾರವಾಗಲಿದೆ. ಆದ್ದರಿಂದ ಪೋಷಕರ ಶಿಕ್ಷಕರ ಅಭಿಪ್ರಾಯವನ್ನು ಸಂಗ್ರಹಿಸಿ ನಂತರವಷ್ಟೆ ಕ್ರಮಕೈಗೊಳ್ಳುವುದು ಸೂಕ್ತ ಆದರೆ ಖಾಸಗಿಯವರ ಒತ್ತಡದಿಂದ ರಾಜ್ಯದಲ್ಲಿ ಶಾಲಾ ಕಾಲೇಜುಗಳನ್ನು ಆರಂಭಿಸಿದರೆ ಅದಕ್ಕೆ ನನ್ನ ವಿರೋಧವಿದೆ ಎಂದು ಸ್ಪಷ್ಟಪಡಿಸಿದರು.
