ಕಡೂರಿನಲ್ಲಿ ಸದ್ದಿಲ್ಲದೆ ಆರಂಭಗೊಂಡ ಕರೊನಾ ಕೇರ್ ಸೆಂಟರ್ : ಹೇಗಿದೆ ಗೊತ್ತಾ..?

ಕಡೂರು: ತಾಲೂಕಿನ ಕರೊನಾ ಸೋಂಕಿತರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದೀಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೊನಾ ಕೇರ್ ಸೆಂಟರ್ ಸದ್ದಿಲ್ಲದೆ ಸೋಮವಾರದಿಂದ ಪ್ರಾರಂಭಗೊಂಡಿದೆ.
ಹೆಚ್ಚು ಸೋಂಕಿತರ ಪ್ರಕರಣದಿಂದ ಚಿಕ್ಕಮಗಳೂರು ಜಿಲ್ಲಾ ಕರೊನಾ ಆಸ್ಪತ್ರೆಗೆ ದಾಖಲಿಸಲಾಗುತ್ತಿತ್ತು. ಇದೀಗ ಪಟ್ಟಣದ ಆಸ್ಪತ್ರೆಯಲ್ಲೇ ಆರಂಭದಿಂದ ಕರೊನಾ ಸೊಂಕಿತರಿಗೆ ಸಮಾಧಾನ ತಂದಿದೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿನ ವಾರ್ಡ್ ಗಳನ್ನು ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ. ಒಟ್ಟು 50ಹಾಸಿಗೆ ಸಾಮರ್ಥ್ಯದ ಕೇರ್ ಸೆಂಟರ್ ನಲ್ಲಿ ಪ್ರತ್ಯೇಕವಾಗಿ ಪುರುಷ ಮತ್ತು ಮಹಿಳೆಯರಿಗೆ ತಲಾ 16 ಹಾಸಿಗೆ ಮೀಸಲಿಡಲಾಗಿದೆ. 18 ಬೆಡ್ ಗಳನ್ನು ಸೋಂಕು ಲಕ್ಷಣವಿಲ್ಲದ ರೋಗಿಗಳಿಗೆ ಮೀಸಲಿಡಲಾಗಿದೆ.

ಸೋಂಕಿತರ ವಾರ್ಡಿನಲ್ಲಿ ನಿರಂತರ ಬಿಸಿನೀರು, ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಅಗತ್ಯ ಕಂಡುಬಂದರೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲು ಪೂರಕವಾಗಿ ಸೆಂಟ್ರಲೈಸ್ಡ್ ಆಕ್ಸಿಜನ್ ವ್ಯವಸ್ಥೆಯನ್ನು ಮಾಡಲಾಗಿದ್ದು ಆಕ್ಸಿಜನ್ ಸಿಲಿಂಡರ್ ಗಳನ್ನು ದಾಸ್ತಾನು ಮಾಡಲಾಗಿದೆ. ಆಗತ್ಯ ಸಿಬ್ಬಂದಿಗಳು ಮುನ್ನೆಚ್ಚರಿಕಾ ಕ್ರಮಗಳೊಡನೆ ನಿಯೋಜನೆಗೊಂಡಿದ್ದಾರೆ.

ಈಗಾಗಲೇ 10ಕ್ಕೂ ಅಧಿಕ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ. ಕರೊನಾ ಕೇರ್ ಸೆಂಟರ್ ಅಧಿಕೃತ ವಾಗಿ ಉದ್ಘಾಟನೆಯಾಗದಿದ್ದರೂ ಸೋಂಕಿತರಿಗೆ ಚಿಕಿತ್ಸೆ ನೀಡಲು ಇಲಾಖೆ ಮುಂದಾಗಿರುವುದು ಸೋಂಕಿತರಿಗೆ ನೆಮ್ಮದಿ ತಂದಿದೆ.

Post a Comment

Previous Post Next Post