ಶ್ರಮದಾನದ ಮೂಲಕ ರಸ್ತೆ ದುರಸ್ತಿ ಮಾಡಿದ ಆಟೋ ಚಾಲಕರಿಗೆ ಸಾರ್ವ ಜನಿಕರ ಮೆಚ್ಚುಗೆ.

ಸಕಲೇಶಪುರ ಪಟ್ಟಣದ  ಸಕಲೇಶ್ವರ ಸ್ವಾಮಿ ದೇವಸ್ಧಾನ ಸಮೀಪದ ಆಟೋ ನಿಲ್ದಾಣಕ್ಕೆ‌ ಹೊಂದಿ ಕ್ಕೊಡಂತಿರುವ ರಸ್ತೆ ಡಾಂಬರು ಮತ್ತು ಸಿಮೆಂಟ್ ಕಿತ್ತು ಹೋಗಿ ಗುಂಡಿ ಬಿದ್ದು ಸಂಪೂರ್ಣ ಹಾಳಾಗಿ ರಸ್ತೆ ಸಂಚಾರ ದುಸ್ತರವಾಗಿತ್ತು ಇದಕ್ಕೆ‌‌ ಸಂಬಂಧಪಟ್ಟ ಇಲಾಖೆಗಳಿಗೆ ರಸ್ತೆ ದುರಸ್ತಿ ಮಾಡುವಂತೆ‌ ಸಾಕಷ್ಟು‌ ಬಾರಿ ಮನವಿ ಮಾಡಿ ಕ್ಕೊಂಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ‌ ಮಲೆನಾಡು ಆಟೋ ಸಂಘದ ಸದಸ್ಯರುಗಳು‌, ಸಾರ್ವಜನಿಕರು  ದೇಣಿಗೆ ಮೂಲಕ‌ ಹಣ ಸಂಗ್ರಹಿಸಿ ಹಾಗೂ ಶ್ರಮದಾನದ ಮೂಲಕ ಗುಂಡಿಗಳಲ್ಲಿ ಕಾಂಕ್ರೀಟ್ ಮಿಶ್ರಣ ತುಂಬಿಸಿ ರಸ್ತೆ ದುರಸ್ಧಿ ಮಾಡಿದ್ದಾರೆ. 
ಶ್ರಮದಾನದ ನೇತೃತ್ವವನ್ನು ಆಟೋ ಚಾಲಕರುಗಳಾದ ರವಿ,ಮೋಣು,ಮಹೇಶ್,ಬಾಷಾ, ಮಾದೇಶ. ಮುಂತಾದವರು ವಹಿಸಿದರು. ಅಟೋ ಚಾಲಕರ ಈ ಕೆಲಸವನ್ನು ಹಳೆಯ ಸೇತುವೆ ಮೇಲೆ ಓಡಾಡುವ ಸಾರ್ವಜನಿಕರು ಶ್ಲಾಘಿಸಿದ್ದಾರೆ.

Post a Comment

Previous Post Next Post