ಹಾಸನ,ಸೆ.29:- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಚೇರಿಯಲ್ಲಿಂದು ಸೆ.25 ಹಾಗೂ ಸೆ.29 ರಂದು ವಿಭಾಗದ ವಾಹನಗಳಲ್ಲಿ ಅಪಘಾತದಿಂದ ಮೃತರಾದವರ ವಾರಸುದಾರರಿಗೆ ಅಪಘಾತ ಪರಿಹಾರ ಧನ ವಿತರಿಸಲಾಯಿತು.
ಹೊಳೆನರಸೀಪುರ ಘಟಕದ ವಾಹನ ಸಂಖ್ಯೆ ಕೆಎ13 ಎಫ್1353 ರಲ್ಲಿ 2013ರ ಆಗಸ್ಟ್ 18 ರಂದು ಮರಣಾಂತಿಕ ಅಪಘಾತದಲ್ಲಿ ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಕೆಂಪೇಗೌಡ ರವರು ಮೃತಪಟ್ಟಿದ್ದು, ಮೃತರ ಅಣ್ಣ ನಂಜುಂಡೇಗೌಡ ಬಿನ್ ಸಣ್ಣಲಕ್ಕೇಗೌಡ ಬಂಟರತಳಾಲು ಗ್ರಾಮ, ಹಳ್ಳಿಮೈಸೂರು ಹೋಬಳಿ ಇವರಿಗೆ ಸಂಸ್ಥೆಯ ನಿಯಮಾವಳಿಯಂತೆ 2.50 ಲಕ್ಷ ರೂ. ಚೆಕ್‍ನ್ನು ಇಂದು ವಿಭಾಗೀಯ ನಿಯಂತ್ರಣಾಧಿಕಾರಿಯವರು ಹಸ್ತಾಂತರಿಸಿದರು.
ಹೊಳೆನರಸೀಪುರ ಘಟಕದ ವಾಹನ ಸಂಖ್ಯೆ ಕೆಎ13 ಎಫ್ 1817 ರಲ್ಲಿ 2018ರ ಎಪ್ರಿಲ್ 11 ರಂದು ಸಂಭವಿಸಿದ ಮರಣಾಂತಿಕ ಅಪಘಾತದಲ್ಲಿ ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಹುಚ್ಚಮ್ಮ, ಸುಮಾರು 52 ವರ್ಷ ರವರು ಮೃತಪಟ್ಟಿದ್ದು, ಮೃತರ ಮಗನಾದ ಓ.ಜೆ. ರಂಗಸ್ವಾಮಿ, ಬಿನ್ ಜವರಯ್ಯ ಹಳ್ಳಿ ಮೈಸೂರು ಹೋಬಳಿ ಓಡನಹಳ್ಳಿ ಗ್ರಾಮ, ಇವರಿಗೆ ಸಂಸ್ಥೆಯ ನಿಯಮಾವಳಿಯಂತೆ 3 ಲಕ್ಷ ರೂ. ಚೆಕ್‍ನ್ನು ಸೆ.25 ರಂದು ವಿಭಾಗೀಯ ನಿಯಂತ್ರಣಾಧಿಕಾರಿಯವರು ನೀಡಿರುತ್ತಾರೆ.
ಅರಕಲಗೂಡು ಘಟಕದ ವಾಹನ ಸಂಖ್ಯೆ ಕೆಎ13 ಎಫ್2334 ರಲ್ಲಿ 2019ರ ನವೆಂಬರ್ 25 ರಂದು ಸಂಭವಿಸಿದ ಮರಣಾಂತಿಕ ಅಪಘಾತದಲ್ಲಿ ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಅಭಿಷೇಕ್ ರವರು ಮೃತಪಟ್ಟಿದ್ದು, ಮೃತರ ತಾಯಿ ವಾರಿಜ ಕೊಂ. ಸಂತೋಷ, ನಂ 49, 1ನೇ ಮೈನ್ ರೋಡ್, ಕೌದೇನಹಳ್ಳಿ, ರಾಮಮೂರ್ತಿ ನಗರ ಬೆಂಗಳೂರು-16 ರವರಿಗೆ ಸಂಸ್ಥೆಯ ನಿಯಮಾವಳಿಯಂತೆ 3 ಲಕ್ಷ ರೂ.ಗಳ ಚೆಕ್‍ನ್ನು ಸೆ.25 ರಂದು ವಿಭಾಗೀಯ ನಿಯಂತ್ರಣಾಧಿಕಾರಿಯವರು ನೀಡಿರುತ್ತಾರೆ.