ಬೈಕೆರೆ ಗ್ರಾಮದಲ್ಲಿ ಪಶುಚಿಕಿತ್ಸಾಲಯ ಕಟ್ಟಡ ಉದ್ಘಾಟನೆ

ತಾಲ್ಲೂಕಿನ ಬೈಕೆರೆ ಗ್ರಾಮದಲ್ಲಿ ಸುಮಾರು 51ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಪಶುಚಿಕಿತ್ಸಾಲಯ ಕಟ್ಟಡವನ್ನು ಶಾಸಕ ಎಚ್‌.ಕೆ. ಕುಮಾರಸ್ವಾಮಿ ಮಂಗಳವಾರ ಉದ್ಘಾಟಿಸಿದರು.
ಗ್ರಾಮೀಣ ಪ್ರದೇಶದಲ್ಲಿ ತುಂಬಾ ವ್ಯವಸ್ಥಿತವಾಗಿ ನಿರ್ಮಾಣ ಮಾಡಿರುವ ಆಸ್ಪತ್ರೆಯನ್ನು ಸುತ್ತಮುತ್ತಲಿನ ಗ್ರಾಮಸ್ಥರು ಬಳಸಿಕೊಳ್ಳಬೇಕು. ಮಲೆನಾಡಿನಲ್ಲಿ ಕಾಲುಬಾಯಿಜ್ವರ ಸೇರಿದಂತೆ ರಾಸುಗಳಿಗೆ ಅನೇಕ ರೋಗ ಬಾದೆ ಇದೆ. ದೂರದ ತಾಲ್ಲೂಕು ಕೇಂದ್ರದ ಆಸ್ಪತ್ರೆಗೆ ಅವುಗಳನ್ನು ಕರೆದುಕೊಂಡು ಹೋಗ ಚಿಕಿತ್ಗಸೆ ಕೊಡಿಸುವ ಸಮಸ್ಯೆ ಇದೀಗ ಬಗೆಹರಿದಿದೆ. ಬೈಕೆರೆ, ನಾಗರ, ದೊಡ್ಡನಾಗರ, ಹಲಸುಲಿಗೆ, ಕಿರೇಹಳ್ಳಿ, ಜನ್ನಾಪುರ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳ ರೈತರಿಗೆ ಇದರಿಂದ ತುಂಬಾ ಉಪಯೋಗ ಆಗಿದೆ. ಈ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಉತ್ತಮ ಸೇವೆ ಸಲ್ಲಿಸಿ ಎಂದು ಕಿವಿ ಮಾತು ಹೇಳಿದರು.
ಕೇಂದ್ರ ಸರ್ಕಾರದ ನಿರ್ದೇಶಕ ಶ್ರೇಣಿಯ ಅಧಿಕಾರಿ ಬೈಕೆರೆ ನಾಗೇಶ್‌ ಅವರು  ಹುಟ್ಟೂರಿನ ಅಭಿಮಾನದಿಂದ 2019–20 ನೇ ಸಾಲಿನಲ್ಲಿ ಎಂಆರ್‌ಪಿಎಲ್‌ ನಿಂದ 32.50 ಲಕ್ಷ ರೂಪಾಯಿ ವಿಷೇಶ ಅನುದಾನ ಹಾಗೂ ರಾಜ್ಯ ಸರ್ಕಾರದದಿಂದ 18.78 ಲಕ್ಷ ರೂಪಾಯಿ ಅನುದಾನ  ಕೊಡಿಸಿದ್ದಾರೆ. ಕೆಆರ್‌ಐಡಿಎಲ್‌ ನಿಂದ ಕಾಮಗಾರಿ ನಿರ್ಮಾಣ ಮಾಡಲಾಗಿದೆ ಎಂದು ಗ್ರಾಮಸ್ಥರು ನಾಗೇಶ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಜಿ.ಪಂ. ಸದಸ್ಯೆ ಚಂಚಲ ಕುಮಾರಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಚೈತ್ರ ನವೀನ್‌, ಗ್ರಾ.ಪಂ. ಮಾಜಿ ಅಧ್ಯಕ್ಷರು ಸದಸ್ಯರು ಇದ್ದರು.

Post a Comment

Previous Post Next Post