ಹಾಸನ: ಕರ್ನಾಟಕ ಬಂದ್ ಅಂಗವಾಗಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಭಾಗಿಯಾಗಿದ್ದ ಪ್ರತಿಭಟನೆ ವೇಳೆ ಗನ್‍ವೊಂದು ಆತಂಕ ಮೂಡಿಸಿದ ಘಟನೆ ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದಲ್ಲಿನಡೆದಿದೆ.
ಸೋಷಿಯಲ್ ಮೀಡಿಯಾದ ಚಾನೆಲೊಂದರ ವರದಿಗಾರನ ಬ್ಯಾಗ್‍ನಲ್ಲಿ ಬಂದೂಕು ಕಂಡು ಪೊಲೀಸರು ಹೌಹಾರಿದ್ದಾರೆ. ಕೂಡಲೇ ಬಂದೂಕು ವಶಕ್ಕೆ ಪಡೆದು ಪೊಲೀಸರು ಯುವಕನನ್ನು ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಬ್ಯಾಗ್ ನಲ್ಲಿ ಇದ್ದದ್ದು ಏರ್ ಗನ್ ಅನ್ನೋದು ಖಾತ್ರಿಯಾಗಿದೆ. ತನಗೆ ಬೆದರಿಕೆ ಇದೆ ಎಂದು ಬ್ಯಾಗ್‍ನಲ್ಲಿ ಏರ್‍ಗನ್ ಇಟ್ಟುಕೊಂಡು ಓಡಾಡುತ್ತಿದ್ದ. ಶಾಸಕ ಕೆ.ಎಂ.ಶಿವಲಿಂಗೇಗೌಡ ಭಾಗಿಯಾಗಿದ್ದ ಪ್ರತಿಭಟನೆಯಲ್ಲಿ ಶಾಸಕರ ಬೈಟ್ ಪಡೆಯಲು ಬ್ಯಾಗ್ ನಿಂದ ಲೋಗೋ ತೆಗೆಯುವಾಗ ಕಾಣಿಸಿದ ಏರ್ ಗನ್ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತು ಗನ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಏರ್ ಗನ್ ಸಶಸ್ತ್ರ ಕಾಯಿದೆ ವ್ಯಾಪ್ತಿಗೆ ಬಾರದ್ದರಿಂದ ಕೇಸ್ ದಾಖಲಿಸದೆ ಯುವಕನನ್ನು ವಾಪಸ್ ಕಳಿಸಿದ್ದಾರೆ.
ಅರಸೀಕೆರೆ ನಗರ ಪೊಲೀಸ್ ರು ಎನ್‍ಸಿಆರ್ ದಾಖಲಿಸಿ ಗನ್ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.
Tags
ಹಾಸನ