ಬೇಲೂರು:ಬೇಲೂರಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಗೆ 14 ನಿರ್ದೇಶಕರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಪಕ್ಷರಹಿತವಾಗಿ ನಡೆದ ಚುನಾವಣೆಗೆ ಹಲವರು ನಾಮಪತ್ರ ಸಲ್ಲಿಸಿದ್ದರೂ ಸಹ ಅಂತಿಮವಾಗಿ ಅವಿರೋಧ ಆಯ್ಕೆಗೆ ಶಾಸಕ ಕೆ.ಎಸ್.ಲಿಂಗೇಶ್ ಅವರ ನೇತೃತ್ವದಲ್ಲಿನ ಸಭೆಯಲ್ಲಿ ಅವಿರೋಧ ಆಯ್ಕೆಯ ಒಮ್ಮತಕ್ಕೆ ಬರಲಾಯಿತು. ಅದರಂತೆ ಬಿ.ಎಸ್.ರಾಜಶೇಖರ್, ಎ.ಇ.ಮೊಗಪ್ಪಗೌಡ, ವೈ.ಸಿ.ಸುನಿಲ್‍ಕುಮಾರ್, ಬಿ.ಈರಣ್ಣಗೌಡ, ಎ.ಸಿ.ಶಿವಶಂಕರಯ್ಯ, ಡಿ.ನಟರಾಜ್, ಶಿವಲಿಂಗೇಗೌಡ, ರತ್ನಮ್ಮ, ಮಾದಪ್ಪ, ಹೆಚ್.ವಿ.ಶಿವಶಂಕರ್, ಎಸ್.ಎ.ರಮೇಶ್, ಗೌರಮ್ಮ, ಎಂ.ಎ.ಚಿತ್ರಲೇಖಾ, ಹೆಚ್.ಎಂ.ದಿನೇಶ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಚುನಾವಣಾಧಿಕಾರಿ ಘೋಷಿಸಿದರು.