ಬೇಲೂರು ಟಿಎಪಿಸಿಎಂಎಸ್ ಅಧ್ಯಕ್ಷ ಚಂದ್ರೇಗೌಡ, ಉಪಾಧ್ಯಕ್ಷ ಕುಮಾರ್

ಬೇಲೂರು : ಇಲ್ಲಿನ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಜಿ.ಪಂಚಾಯಿತಿ ಮಾಜಿ ಅಧ್ಯಕ್ಷ ಜಾ.ಜನತಾದಳದ ಬಿ.ಡಿ.ಚಂದ್ರೇಗೌಡ ಉಪಾಧ್ಯಕ್ಷರಾಗಿ ಕುಮಾರ್ ಆಯ್ಕೆಗೊಂಡಿದ್ದಾರೆ.
    ಇಂದು ನಡೆದ ಚುನಾವಣೆಯಲ್ಲಿ ಈ ಇಬ್ಬರು ಮಾತ್ರವೆ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾದ ಬಿಇಒ ಲೋಕೇಶ್ ಆಯ್ಕೆಯನ್ನು ಘೋಷಿಸಿದರು. ಈ ಸಂದರ್ಭ ಹಾಜರಿದ್ದ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಜಾ.ದಳದ ಹಿಡಿತಕ್ಕೆ ಎಪಿಎಂಸಿ ಬಂದಿದೆ. ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ಆಗಲು ಸಹಕರಿಸಿದ ನಿರ್ದೇಶಕರು, ಪಕ್ಷದ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸಿದರು.
    ಜಾ.ದಳ ತಾ.ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ ಮಾತನಾಡಿ, ರೈತರಿಗೆ ಬೆನ್ನೆಲುಬಾಗಿರುವ ಸಹಕಾರ ಸಂಘಗಳೆ ತಳಹದಿಯಾಗಿದೆ. ಸಹಕಾರ ಸಂಘಗಳು ಉತ್ತಮವಾಗಿ ನಡೆಯುತ್ತಿದ್ದರೆ ಅಲ್ಲಿನ ಗ್ರಾಮೀಣ ಜನರಿಗೆ ಸೌಲಭ್ಯಗಳ ನೀಡಬಹುದು. ಇದಕ್ಕೆ ಉದಾಹರಣೆಯಾಗಿ ಶಿರಸಿಯಲ್ಲಿ ಟಿಎಪಿಸಿಎಂಎಸ್ ಇದ್ದು 25 ಸಾವಿರ ಸದಸ್ಯರಿದ್ದಾರೆ. ಈ ಸೊಸೈಟಿಯಲ್ಲಿ ಗುಂಡುಸೂಜಿಯಿಂದ ಹಿಡಿದು ಟ್ರಾಕ್ಟರ್‍ವರಗೆ ಕೃಷಿ ಉಪಕರಣ ದೊರೆಯುತ್ತದೆ. ಅವರದ್ದೆ ಆದ ಪೆಟ್ರೋಲ್‍ಬಂಕ್, ಲಾಡ್ಜ್ ಇದ್ದು ವರಮಾನವೂ ಹೆಚ್ಚಿದೆ. ಅಲ್ಲಿಗೆ ಇಲ್ಲಿನ ಆಡಳಿತ ಮಂಡಳಿಯವರು ತೆರಳಿ ಅಧ್ಯಯನ ನಡೆಸಿ ಅದನ್ನು ಇಲ್ಲಿ ಅಳವಡಿಸಿಕೊಳ್ಳಬಹುದೆಂದ ಅವರು ಸೊಸೈಟಿಯಲ್ಲಿ ಈವರಗೆ ಅಧಿಕಾರದಲ್ಲಿ ಇದ್ದವರು ಹೊಸಬರಿಗೆ ಮಾರ್ಗದರ್ಶನ ನೀಡಿ ಬೆಳವಣ ಗೆಗೆ ಸಹಕರಿಸಬೇಕೆಂದರು.
    ಅಧ್ಯಕ್ಷ ಬಿ.ಡಿ.ಚಂದ್ರೇಗೌಡ ಮಾತನಾಡಿ, ಅಧ್ಯಕ್ಷನಾಗಲು ಜೆಡಿಎಸ್ ಪ್ರಮುಖರು ಕಾರಣರಾಗಿದ್ದಾರೆ. ಹಿಂದೆ ಒಮ್ಮೆ ಅಧ್ಯಕ್ಷನಾಗಿದ್ದೆ. ಇದೀಗ ಅವಕಾಶ ದೊರೆತಿದ್ದು ಎಲ್ಲರ ಸಹಕಾರದಿಂದ ಉತ್ತಮ ಆಡಳಿತ ನೀಡುವ ಭರವಸೆಯಿದೆ ಎಂದರು. ಈ ಸಂದರ್ಭ ನಿರ್ದೇಶಕರಾದ ಡಿ.ಇ.ಮಲ್ಲೇಗೌಡ, ಎಸ್.ನಾಗೇಶ್, ಜಿ.ವಿ.ಪ್ರಸಾದ್, ಕೆ.ಜಿ.ಕುಮಾರ್, ಹೆಚ್.ಎಸ್.ರಾಜಶೇಖರಯ್ಯ, ಹೆಚ್.ಎಂ.ಕಾಂತರಾಜು, ಬಿ.ಎಲ್.ಲಕ್ಷ್ಮಣ್, ಡಿ.ಪಿ.ಸೋಮೇಶ್, ವೈ.ಪಿ.ಭಾರತೀಗೌಡ, ಜಾನಕಮ್ಮ, ಯು.ಜಿ.ಪ್ರಿಯಾಂಕ ಇನ್ನಿತರ ಪ್ರಮುಖರು ಇದ್ದರು. ಅಭಿಮಾನಿಗಳು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

Post a Comment

Previous Post Next Post