ಹಾಸನ: ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡವನ್ನು ವಿರೋಧವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಪೊಲೀಸ್ ಬಂದೋಬಸ್ಥ್‍ನಲ್ಲಿ ಎರಡು ಕಟ್ಟವನ್ನು ತೆರವುಗೊಳಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಹಾಸನ ನಗರದ ಸಮೀಪ ದೇವೇಗೌಡ ನಗರದಲ್ಲಿ ನಡೆದಿದೆ.
ಹಾಸನ ತಾಲೂಕಿನ ತಟ್ಟೆಕೆರೆ ಗ್ರಾಮ ಪಂಚಾಯಿತಿಗೆ ಸೇರಿರುವ ದೇವೇಗೌಡರ ನಗರದಲ್ಲಿ ಮೇರಿ ಅಂತೋನಿ ಎಂಬುವರೇ ಯಾವ ಹಕ್ಕುಪತ್ರ ಇಲ್ಲದಿದ್ದರೂ ಅಕ್ರಮವಾಗಿ ಕಟ್ಟಡವನ್ನು ನಿರ್ಮಿಸಿದ ಬಗ್ಗೆ ಮಾಹಿತಿ ಆಧಾರಿಸಿ ದಾಖಲೆ ಪರಿಶೀಲಿಸಿದಾಗ ಅಕ್ರಮ ಕಟ್ಟಡ ಎಂಬುದು ತಿಳಿದು ಬಂದಿದೆ. ಜೆಸಿಬಿ ಮೂಲಕ ಕಟ್ಟಡ ಕೆಡವಲು ಅಧಿಕಾರಿಗಳು ಸ್ಥಳಕ್ಕೆ ಬಂದಾಗ ಅನೇಕರು ಮಾತಿನ ವಾಗ್ವಾದ ನಡೆಸಿ ಅಡ್ಡಿಪಡಿಸಿದರು. ಮೂರು ಬಾರಿ ಕಟ್ಟಡ ಕೆಡವಲು ಯತ್ನಿಸಿದಾಗ ಅಧಿಕಾರಿಗಳು ವಿಫಲವಾಗಿದ್ದರು. ನಂತರದಲ್ಲಿ ಹಾಸನ ನಗರ ಪೊಲೀಸ್ ಠಾಣೆಯ ಪೊಲೀಸರ ಸಹಕಾರದಲ್ಲಿ ಎರಡು ಮನೆಗಳನ್ನು ಜೆಸಿಬಿ ಮೂಲಕ ಕೆಡವಲಾಯಿತು. ರಾಜಕೀಯ ಪ್ರೇರಿತವಾಗಿ ನಾವು ಜೆಡಿಎಸ್ ಪಕ್ಷದವರೆಂದು ಉದ್ದೇಶ ಪೂರ್ವಕವಾಗಿಯೇ ನಮ್ಮ ಕಟ್ಟಡವನ್ನು ಕೆಡವಲಾಗಿದೆ ಎಂದು ಮನೆ ಮಾಲೀಕರ ಆರೋಪವ್ಯಕ್ತಪಡಿಸಿದ್ದಾರೆ. ರಾಜಕೀಯ ಪ್ರೇರಿತ ಮಾತಿಗೆ ಬೆಲೆ ಕೊಡದ ಅಧಿಕಾರಿಗಳು ಕಾನೂನು ಪ್ರಕಾರ ಏನಿದೆ ಕ್ರಮಕೈಗೊಂಡು ಅಕ್ರಮ ಕಟ್ಟಡವನ್ನು ತೆರವುಗೊಳಿಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.