ಹೊಳೆನರಸೀಪುರ: ತಾಲ್ಲೂಕಿನಲ್ಲಿ ರೈತರ ಸಮಸ್ಯೆಗಳು ಸಾಕಷ್ಟಿದ್ದು, ಕೂಡಲೇ ತಹಸೀಲ್ದಾರ್ ಅವರು ರೈತ ಸಂಪರ್ಕ ಸಭೆಯನ್ನು ಕರೆದು ಚರ್ಚಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ದಂಡಾಧಿಕಾರಿಗಳ ಕಛೇರಿಯಲ್ಲಿ ರೈತರಿಗೆ ಹಾಗೂ ಸಾರ್ವಜನಿಕರ ಅರ್ಜಿ ದಾಖಲೆಗಳನ್ನು ಒದಗಿಸಲು ವಿಳಂಭವಾಗುತ್ತಿದೆ.ಲಂಚದ ಹಾವಳಿ ಹೆಚ್ಚಾಗಿದೆ ಈ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿದರು.ಹೀಗೆ ಹತ್ತು ಹಲವು ಸಮಸ್ಯೆಗಳಿದ್ದು, ಕೂಡಲೇ ಸಭೆ ಕರೆಯುವಂತೆ ಆಗ್ರಹಿಸಿದರು. ಈ ವೇಳೆ ತಾಲ್ಲೂಕು ಅಧ್ಯಕ್ಷ ನರಸಿಂಹ,ಸೋಮಶೇಖರ್,ಗುಲಗಂಜಿಹಳ್ಳಿ ಸತೀಶ್,ಸೂರನಹಳ್ಳಿ ಮಂಜು, ಶಿವಲಿಂಗಪ್ಪ, ಪುಟ್ಟರಾಜು ಇತರರಿದ್ದರು.