ಕಾಂಗ್ರೆಸ್‍ಗೆ ಚುನಾವಣೆ ಎದುರಿಸುವ ಶಕ್ತಿಯೇ ಇಲ್ಲ- ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ



ಮೈಸೂರು,ಅ.15: ಪರಿಶಿಷ್ಟ ಜಾತಿಗೆ ಸೇರಿದ ಶಾಸಕನ ಮನೆಗೆ ಬೆಂಕಿ ಹಚ್ಚುವ ಕೆಲಸವನ್ನು ಕಾಂಗ್ರೆಸ್ಸಿ ಗರೇ ಮಾಡಿದ್ದಾರೆ. ಅವರನ್ನು ಬಂಧಿಸಿ ಅಂತ ಹೇಳಲು ಆ ಪಕ್ಷದ ಅಧ್ಯಕ್ಷರಿಗೆ ಆಗುತ್ತಿಲ್ಲ. ಇಂಥವರು ಚುನಾ ವಣೆಯನ್ನು ಹೇಗೆ ಎದುರಿಸು ತ್ತಾರೆ, ಕಾಂಗ್ರೆಸ್ ಗೆ ಚುನಾವಣೆ ಎದುರಿಸುವ ಶಕ್ತಿಯೂ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದರು. 
ರಾಜ್ಯ ಬಿಜೆಪಿ ಪಧಾಧಿಕಾರಿ ಗಳ ಸಭೆಯನ್ನು ಉದ್ಘಾಟಿಸಿ ಮಾತ ನಾಡಿದ ಕಟೀಲ್, ""ಉಪ ಚುನಾ ವಣೆ ನಡೆಯುವ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಪರ ಒಲವಿದೆ. ಎರಡೂ ಕ್ಷೇತ್ರಗಳಲ್ಲೂ ಗೆಲ್ಲು ತ್ತೇವೆ. ವಿಧಾನ ಪರಿಷತ್ತಿನಲ್ಲೂ ನಾಲ್ಕು ಸ್ಥಾನ ನಮ್ಮದಾಗಲಿದೆ. ಗ್ರಾಮ ಪಂಚಾಯಿತಿ ಚುನಾ ವಣೆಗೆ ಸಿದ್ಧತೆಗಳು ಆಗಿವೆ. ಕರ್ನಾ ಟಕದಲ್ಲಿ 224 ಕ್ಷೇತ್ರ ನಮ್ಮ ಗುರಿ. ಆ ಗುರಿಯನ್ನು ಗಮನ ದಲ್ಲಿ ಟ್ಟುಕೊಂಡು ಕಾರ್ಯೋ ನ್ಮುಖ ರಾಗುತ್ತೇವೆ ಎಂದು ತಿಳಿಸಿದರು. 
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತ ನಾಡಿ, ಕೇಡರ್‍ಗಳೇ ಲೀಡರ್ ಗಳಾಗುವ ದೇಶದ ಏಕೈಕ ಪಕ್ಷ ಬಿಜೆಪಿ ಎಂದು ಬಣ್ಣಿಸಿದರು. ನನ್ನಂಥ ಸಾಮಾನ್ಯ ಕಾರ್ಯ ಕರ್ತನಿಗೆ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿಯಂತಹ ಹುದ್ದೆ ಸಿಕ್ಕಿರುವುದು ರೋಮಾಂಚನ ಉಂಟು ಮಾಡು ತ್ತದೆ ಎಂದರು. 
 ಕಾಂಗ್ರೆಸ್ ಗೆ ನೈತಿಕತೆ ಎಲ್ಲಿದೆ ಕಾಂಗ್ರೆಸ್ ಗೆ ನೈತಿಕತೆ ಎಲ್ಲಿದೆ ಪ್ರಜಾಪ್ರಭುತ್ವ ಹೆಸರಿನಲ್ಲಿ ವಂಶ ಪಾರಂಪರ್ಯ ರಾಜಕಾರಣ ಮಾಡಲಾಗುತ್ತಿತ್ತು, ಆದರೆ ಬಿಜೆಪಿ ಇದನ್ನು ತಡೆದಿದೆ. ಪ್ರಜಾಪ್ರಭುತ್ವದ ಬಗ್ಗೆ ಮಾತಾಡುವ ನೈತಿಕತೆ ಕಾಂಗ್ರೆಸ್ ಗೆ ಎಲ್ಲಿದೆ? ಉಳಿದ ಪಕ್ಷಗಳ ಬಗ್ಗೆ ನಾನು ಮಾತಾಡಲ್ಲ ಎಂದರು. ಸಭೆಯಲ್ಲಿ ಸಚಿವ ಎಸ್.ಟಿ ಸೋಮ ಶೇಖರ್, ಸಂಸದ ಪ್ರತಾಪ್ ಸಿಂಹ, ಎಂಎಲ್ಸಿ ಎಚ್.ವಿಶ್ವನಾಥ್, ಶಾಸಕರಾದ ಎಲ್.ನಾಗೇಂದ್ರ, ಹರ್ಷ ವರ್ಧನ್, ಎಸ್.ಎ ರಾಮದಾಸ್ ಪ್ರಮುಖರು ಭಾಗಿಯಾಗಿದ್ದರು.

Post a Comment

Previous Post Next Post