ಹಾಸನ ಜಿಲ್ಲೆಯಲ್ಲಿ ಮ್ಯಾನ್ಯಯಲ್ ಸ್ಕ್ಯಾವೆಂಜರ್ ತಡೆಗೆ ಕಠಿಣ ಕ್ರಮವಹಿಸಿ ವ್ಯಾಪಕವಾದ ಜಾಗೃತಿ ಮೂಡಿಸುವುದರ ಜೊತೆಗೆ ಸಕ್ಕಿಂಗ್ ಯಂತ್ರದ ಸೌಲಭ್ಯ ಎಲ್ಲಾ ಪ್ರದೇಶಗಳಿಗೂ ಲಭ್ಯವಾಗುವಂತೆ ವ್ಯವಸ್ಥೆ ಮಾಡುವುದರ ನಗರ ಸ್ಥಳೀಯ ಸಂಸ್ಥೆಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಮ್ಯಾನ್ಯಯಲ್ ಸ್ಕ್ಯಾವೆಂಜರ್ ನಿಯೋಜನೆ ನಿಷೇಧ ಮತ್ತು ಪುರ್ನವಸತಿ ಅಧಿನಿಯಮ ಕುರಿತು ಸಭೆಯಲ್ಲಿ ಮಾತನಾಡಿದ ಅವರು ಸರ್ಕಾರದ ನಿಯಮಗಳ ಅನುಷ್ಠಾನಕ್ಕೆ ಸಂಬಂಧ ಪಟ್ಟ ಇಲಾಖೆಗಳು ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದು ಹೇಳಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೈರ್ಮಲ್ಯ ರಚಿತ ಶೌಚಾಲಯಗಳನ್ನು ಪತ್ತೆಮಾಡಿ ವ್ಯವಸ್ಥಿತವಾಗಿ ಅವುಗಳ ಸ್ವಚ್ಚತೆಗೆ ಕ್ರಮವಹಿಸಬೇಕು ಎಂದು ಅವರು ಹೇಳಿದರು.
ಮ್ಯಾನ್ಯಯಲ್ ಸ್ಕ್ಯಾವೆಂಜರ್ ನಿಷೇಧ ಕಾಯ್ದೆ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ಅರಿವು ಮೂಡಿಸಬೇಕು, ಗ್ರಾಮೀಣ ಪ್ರದೇಶಗಳಲ್ಲಿ ಎಸ್ಟೇಟ್ ಮಾಲೀಕರಿಗೂ ಮಾಹಿತಿ ನೀಡಬೇಕು ಎಂದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಹಾಯವಾಣಿ ಪ್ರಾರಂಭೀಸಬೇಕು, ಪೌರಾಕಾರ್ಮಿಕರು ಹಾಗೂ ಎಲ್ಲಾ ರೀತಿಯ ಸ್ವಚ್ಚತಾ ಕೆಲಸಗಾರರಿಗೆ ಆರೋಗ್ಯ ತಪಾಸಣೆ ಹಾಗೂ ಕೋವಿಡ್ ತಪಾಸಣೆ ಮಾಡಿಸಿ. ಯಾರೊಬ್ಬರು ಶೌಚಗುಂಡಿಯೊಳಗೆ ಇಳಿಯಂತೆ ನಿರ್ದೇಶನ ನೀಡಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮ್ಯಾನ್ಯಯಲ್ ಸ್ಕ್ಯಾವೆಂಜಿಂಗ್ ಪದ್ದತಿಯನ್ನು ಪ್ರೇರೇಪಿಸುವವರ ವಿರುದ್ದ ಕ್ರಿಮಿನಲ್ ಕೇಸ್‍ಹಾಕಿ ಮೃತಪಟ್ಟವರಿಗೆ ಪರಿಹಾರ ನೀಡಿ ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಅವರು ಮಾತನಾಡಿ ಮ್ಯಾನ್ಯಯಲ್ ಸ್ಕ್ಯಾವೆಂಜಿಂಗ್ ಮಾಡಿಸಿದ ಎಸ್ಟೇಟ್ ಮಾಲೀಕರ ವಿರುದ್ದ ಕ್ರಮಜರುಗಿಸಿ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಅವರಿಂದಲೇ ಪರಿಹಾರ ಭರಿಸಬೇಕು. ಈ ಸಂಬಂಧ ನಿರ್ಲಕ್ಷ ತೋರಿದ ಅಧಿಕಾರಿಗಳ ವಿರುದ್ದವೇ ಕ್ರವವಹಿಸಬೇಕು ಎಂದು ಅವರು ಹೇಳಿದರು.
ಪೌರಕಾರ್ಮಿಕರನ್ನು ಖಾಯಂ ಮಾಡುವ ಸಂದರ್ಭದಲ್ಲಿ ಕೆಲವರು ಕೈಬಿಟ್ಟುಹೋಗಿದ್ದಾರೆ ಮಾನವೀಯತೆ ಹಾಗೂ ಸೇವಾನುಭವದ ಆಧಾರದಲ್ಲಿ ಅವರುಗಳನ್ನು ಖಾಯಂಗೊಳಿಸಬೇಕು ಎಂದು ಸದಸ್ಯಾದ ಸೋಮಶೇಖರ ಹಾಗೂ ಪಳನಿಯವರು ಮನವಿ ಮಾಡಿದರು.
ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಾದ ಶೀಧರ್ ಮತ್ತಿತರರು ಹಾಜರಿದ್ದರು.
Tags
ಹಾಸನ