ಕೃಷಿ ಇಲಾಖೆಯಿಂದ ರೈತ ಮಹಿಳೆ ಕವಿತಾ ಅವರಿಗೆ ಸನ್ಮಾನ

ಹೊಳೆರಸೀಪುರ: ಕೃಷಿ ಇಲಾಖೆವತಿಯಿಂದ ತಾಲ್ಲೂಕಿನ ಬಂಟರತಳಾಲು ಗ್ರಾಮದ ಪ್ರಗತಿಪರ ರೈತ ಮಹಿಳೆ ಕವಿತಾ ಅವರನ್ನು ಸನ್ಮಾನಿಸಿ ಗೌರವಿಸಿದರು.
          ಕವಿತಾ ತಮ್ಮ ಜಮೀನಿನಲ್ಲಿ ಬಾಳೆ, ಅವರೆ, ಮೆಣಸಿನ ಕಾಯಿ, ಟಮೋಟ ಇತರ ಬೆಳೆಗಳನ್ನು ಬೆಳೆಯುವದರ ಜೊತೆಗೆ ಹಸು ಸಾಕಾಣಿಕೆ, ಕೋಳಿ ಸಾಕಾಣಿಕೆಯನ್ನು ನಡೆಸಿ ಕೃಷಿಕ ಮಹಿಳೆ ಎನಿಸಿಕೊಂಡಿದ್ದರು. ಶನಿವಾರ ತಾಲ್ಲೂಕಿನ ಉಣ್ಣೇನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ನಡೆಸಿದ ಕಾರ್ಯಕ್ರಮದಲ್ಲಿ ಕವಿತಾ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು. ಶಾಮಾಲ ಮಾತನಾಡಿ ಇಂದಿನ ದಿನದಲ್ಲಿ ಮಹಿಳೆಯರು ಎಲ್ಲ ರಂಗದಲ್ಲಿ ಸಾಧನೆ ಮಾಡುತ್ತಿರುವುದು ಮಹಿಳೆಯರ ಗೌರವವನ್ನು ಹೆಚ್ಚಿಸಿದೆ ಎಂದರು. ಸಾವಯವ ಕೃಷಿಕ ಹೊಯ್ಸಳ ಎಸ್. ಅಪ್ಪಾಜಿ, ಮಧುಸೂಧನ ಇತರರು ಇದ್ದರು

Post a Comment

Previous Post Next Post