ಶ್ರೀ ಪುಷ್ಪಗಿರಿ ಮಹಾಸಂಸ್ಥಾನದ ಪರಮಪೂಜ್ಯರಾದ ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿಯವರು ಸುಮಾರು ಹತ್ತು ಹದಿನೈದು ವರ್ಷಗಳಿಂದ ಸಂಪೂರ್ಣವಾಗಿ ಸಮಾಜ ಸೇವೆ . ಕೃಷಿ ನೀರಾವರಿ ಹೋರಾಟ ಹಾಗೂ ಗ್ರಾಮೀಣಾಭಿವೃದ್ಧಿ ಯೋಜನೆಯಂತಹ ಉತ್ತಮವಾದ ಕೆಲಸಗಳನ್ನು ನಡೆಸಿಕೊಂಡು ಬರುತ್ತಿದ್ದು , ಹಾಗೂ ಶ್ರೀ ಪುಷ್ಪಗಿರಿ ಕ್ಷೇತ್ರವನ್ನು ಒಂದು ಸುಂದರವಾದ ಪ್ರವಾಸಿತಾಣವನ್ನಾಗಿ ಅಭಿವೃದ್ಧಿ ನಿಟ್ಟಿನಲ್ಲಿ ಸ್ವಾಮೀಜಿಯವರು ತಮ್ಮನ್ನು ತಾವು ತೊಡಗಿಸಿಕೊಂಡು ಇಡಿ ನಾಡಿನಾದ್ಯಂತ ರಾಜ್ಯಕ್ಕೆ ಚಿರಪರಿಚಿತರಾಗಿದ್ದು , ಅತಿ ಚಿಕ್ಕ ವಯಸ್ಸಿನಲ್ಲಿ ಎಲ್ಲಾ ಸಮಾಜಥ ಜನರ ಗೌರವಕ್ಕೆ ಪಾತ್ರರಾಗಿರುತ್ತಾರೆ , ಹಾಗಾಗಿ ಎರಡು ವರ್ಷದ ಹಿಂದೆ ಪಾಂಡಿಚೇರಿಯ ಯುನಿವರ್ಸಿಟಿಯು ಆ ತುಂಬು ಸಮಾರಂಭದಲ್ಲಿ ಸ್ಥಳೀಯ ಸಚಿವರು ಮತ್ತು ನ್ಯಾಯಧೀಶರು ಹಾಗೂ ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ಶ್ರೀ ಗಳಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದರು , ಆದರೇ ಶ್ರೀಗಳು ಬಡವರ ಗ್ರಾಮೀಣಾಭಾಗದ ಕೂಲಿಕಾರ್ಮಿಕರ ಏಳಿಗೆಯ ಮುಂದೆ ಡಾಕ್ಟರೇಟ್ ಪದವಿ ಏನು ಅಲ್ಲ ಎಂದು ವಲ್ಲದ ಮನಸ್ಸಿನಲ್ಲೇ ಸ್ವೀಕರಿಸಿದ್ದರು , ಆದರೆ ಇತ್ತಿಚೀನ ದಿನಗಳಲ್ಲಿ ಗೌರವ ಡಾಕ್ಟರೇಟ್ ಎನ್ನುವಂತದ್ದು ಅರ್ಥವಿಲ್ಲದ ರೀತಿಯಂತಾಗಿದ್ದು ಸ್ವಾಮೀಜಿಯವರು ಅದನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಕೊಟ್ಟ ಯುನಿವರ್ಸಿಟಿ ಯವರಿಗೆ ಅದಕ್ಕೆ ಸಂಬಂಧ ಪಟ್ಟ ಸರ್ಟಿಫೀಕೆಟ್ ಹಾಗೂ ಪದಕಗಳನಲ್ಲಾ ಎರಡು ಹಿಂದೆ ಹಿಂದಿರುಗಿಸಿದ್ದಾರೆ . ಹಾಗಾಗಿ ಸ್ವಾಮೀಜಿಯವರ ಭಕ್ತ ಮುಂದೆ ಡಾಕ್ಟರ್ ಎಂಬ ಪದವನ್ನು ಬಳಸಬಾರದು ಎಂದು ಪ್ರಕಟಣೆಯಲ್ಲಿ ಸ್ವಾಮೀಜಿಯವರು ಮನವಿ ಮಾಡಿಕೊಂಡಿದ್ದಾರೆ.
Tags
ಬೇಲೂರು