ಕ‌.ಸಾ.ಪ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾದ ರವಿನಾಕಲಗೂಡು ಅರಕಲಗೂಡಿನಲ್ಲಿ ಪ್ರಚಾರ ಕಾರ್ಯ

ಕನ್ನಡ ಸಾಹಿತ್ಯ ಪರಿಷತ್ತು, ಹಾಸನ ಜಿಲ್ಲೆಯ ನೂತನ ಅಧ್ಯಕ್ಷರ ಸ್ಥಾನಕ್ಕೆ ‌ಸ್ಪರ್ಧಿಸಲು ಆಕಾಂಕ್ಷಿಯಾಗಿರುವ ಹಿರಿಯ ಪತ್ರಕರ್ತರು, ಹಲೋ ಹಾಸನ್ ಸಂಜೆ ದಿನ ಪತ್ರಿಕೆಯ ಸಂಪಾದಕರು, ಕನ್ನಡ ಸಾಹಿತ್ಯ ಪರಿಷತ್ತು ಹಾಸನ, ಇಲ್ಲಿನ ಗೌರವಾನ್ವಿತ ಅಧ್ಯಕ್ಷರು ಆಗಿರುವ ಶ್ರೀಯುತ ರವಿನಾಕಲಗೂಡು ಅವರು ಅರಕಲಗೂಡು ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಿವಿಧ ಸಂಘಟನೆ ಸಮ್ಮುಖದಲ್ಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಅರಕಲಗೂಡು ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ವಿಷ್ಣು ಪ್ರಕಾಶ್, ಅರಕಲಗೂಡು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾದ ವಿರೂಪಾಕ್ಷ್, ಹಿರಿಯ ಪತ್ರಕರ್ತರಾದ ಚಂದ್ರಶೇಖರ್, ವಿಜಯಕುಮಾರ್, ನಿಕಟಪೂರ್ವ ಅಧ್ಯಕ್ಷರಾದ ಅ.ರಾ. ಸುಬ್ಬರಾವ್, ವಿವಿಧ ಸಂಘಟನೆಯ ಪದಾಧಿಕಾರಿಗಳು, ‌ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Post a Comment

Previous Post Next Post