ತಿ.ನರಸೀಪುರ.ಅ.23:-ಮೈಸೂರು ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅರೋಗ್ಯಹಸ್ತ ಕಾರ್ಯಕ್ರಮದಲ್ಲಿ ಕೊರೊನ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ಆರೋಗ್ಯ ಕವಚ ಯೋಜನೆಯಡಿ ವಿಮಾ ಬಾಂಡ್ ವಿತರಿಸಲಾಯಿತು.
ಪಟ್ಟಣದ ಮರೀಗೌಡ ಸ್ಮಾರಕ ಭವನದಲ್ಲಿ ಮೈಸೂರು ಗ್ರಾಮೀಣ ಜಿಲ್ಲಾ ಕಾಂಗ್ರೆಸ್, ತಿ.ನರಸೀಪುರ ಮತ್ತು ಬನ್ನೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ಅರೋಗ್ಯ ಹಸ್ತ ಕಾರ್ಯಕ್ರಮದಡಿ ಕೊರೊನ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರತಿ ವ್ಯಕ್ತಿಗೆ ಒಂದು ಲಕ್ಷ ರೂಗಳ ಅರೋಗ್ಯ ವಿಮಾ ಬಾಂಡ್ ಅನ್ನು ಯುವ ಕಾಂಗ್ರೆಸ್ ಮುಖಂಡ ಸುನಿಲ್ ಬೋಸ್ ವಿತರಿಸಿ ಆತ್ಮಸ್ಥೈರ್ಯ ತುಂಬಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು,ಕೊರೊನದ ವಿಷಮ ಸ್ಥಿತಿಯಲ್ಲಿ ಸರ್ಕಾರ ಕೈಚೆಲ್ಲಿ ಕುಳಿತಾಗ,ವಿರೋಧ ಪಕ್ಷವಾದ ಕಾಂಗ್ರೆಸ್ ಗ್ರಾಮ ಪಂಚಾಯಿತಿಗಳ ಮಟ್ಟದ ಕೊರೊನ ವಾರಿಯರ್ ಗಳನ್ನು ನೇಮಕ ಮಾಡಿ ವಾರಿಯರ್ ಗಳು ಮನೆ ಮನೆಗೆ ತೆರಳಿ ಪ್ರತಿ ನಾಗರಿಕರ ಅರೋಗ್ಯ ತಪಾಸಣೆ ಮಾಡಿವಲ್ಲಿ ಯಶಸ್ವಿಯಾಗಿದೆ.ಇದರಿಂದ ಕಾಂಗ್ರೆಸ್ ಪಕ್ಷ ಜಾತಿ,ಮತ ಬೇಧವಿಲ್ಲದೆ ಸಮಾಜದ ಪ್ರತಿಯೊಬ್ಬರಿಗೂ ಅರೋಗ್ಯ ಸೇವೆ ನೀಡಿದೆ ಕೊರೊನ ವಾರಿಯರ್ ಗಳು ಅರೋಗ್ಯ ಸೇವೆ ಸಲ್ಲಿಸುವ ವೇಳೆ ಕೊರೊನ ಸೋಂಕಿಗೆ ತುತ್ತಾದಲ್ಲಿ ಅಂತವರು ಕಾಂಗ್ರೆಸ್ ಪಕ್ಷ ವಿತರಿಸಿರುವ ಬಾಂಡ್ ನ ಅಡಿ ರಾಜ್ಯದ ಯಾವುದೇ ಆಸ್ಪತ್ರೆಯಲ್ಲಾದರೂ ಒಂದು ಲಕ್ಷ ವೆಚ್ಚದ ಚಿಕಿತ್ಸೆಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ದೇಶಿ ಮಾತಾಡಿದ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಡಾ. ಬಿ. ಜೆ. ವಿಜಯಕುಮಾರ,ಪಕ್ಷವೊಂದು ತನ್ನ ಕಾರ್ಯಕರ್ತರಿಗೆ ಅರೋಗ್ಯ ವಿಮಾ ಬಾಂಡ್ ವಿತರಿಸುತ್ತಿರುವುದು ಇದೇ ಮೊಟ್ಟಮೊದಲು. ಒಂದು ವಿಧಾನಸಭಾ ಕ್ಷೇತ್ರಕ್ಕೆ ನೂರು ಕೊರೊನ ವಾರಿಯರ್ ಗಳನ್ನು ನೇಮಕ ಮಾಡಿ,ಪ್ರತಿ ವಾರಿಯರ್ ಗೆ 1 ಲಕ್ಷ ರೂಗಳಂತೆ 224 ಕೋಟಿ ರೂಗಳನ್ನು ಕೊರೊನ ವಾರಿಯರ್ ಗಳಿಗಾಗಿ ವ್ಯಯಿಸಿದೆ. ಇದು ಏಷ್ಯಾದಲ್ಲೇ ರಾಜಕೀಯ ಪಕ್ಷವೊಂದು ಕೊರೊನ ವಾರಿಯರ್ ಗಳಿಗೆ ವ್ಯಯಿಸಿದ ಅತ್ಯಂತ ದೊಡ್ಡ ಮೊತ್ತವಾಗಿದೆ ಎಂದರು.
ಮುಂದುವರೆದು ಮತನಾಡಿದ ಅವರು
ಬಿಜೆಪಿ ಉಪಚುನಾವಣೆಯನ್ನು ದುಡ್ಡಿನ ಮೂಲಕ ಗೆಲ್ಲಲು ಪ್ರಯತ್ನಿಸಿದೆ. ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುವುದು ಹೇಗೆ ಎಂದು ಬಿಜೆಪಿ ಪಕ್ಷ ಕರಗತ ಮಾಡಿಕೊಂಡಿದೆ.ಆದರೆ,ಪ್ರಸ್ತುತ ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಮತದಾರ ವಾಮಮಾರ್ಗದ ಬಿಜೆಪಿಯನ್ನು ತಿರಸ್ಕರಿಸಲಿದ್ದು,ಎರಡು ಕಡೆಗಳಲ್ಲೂ ಕಾಂಗ್ರೆಸ್ ಪಕ್ಷ ಹೆಚ್ಚು ಅಂತರದಲ್ಲಿ ಗೆಲ್ಲಲಿದೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ತಿ.ನರಸೀಪುರ ಬ್ಲಾಕ್ ಕಾಂಗ್ರೇಸ್ ಸಮಿತಿ ಅಧ್ಯಕ್ಷರು ಆದ ತಲಕಾಡು ಮಂಜುನಾಥ್ , ಬನ್ನೂರು ರವೀಂದ್ರ ಕುಮಾರ್, ತಾ.ಪಂ.ಅಧ್ಯಕ್ಷ ಹ್ಯಾಕನೂರು ಉಮೇಶ್, ಸಾಮಾಜೀಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ತಾ.ಪಂ.ಸದಸ್ಯರಾದ ರಾಮಲಿಂಗಯ್ಯ, ಕುಕ್ಕೂರ್ ಗಣೇಶ್ , ಪುರಸಭಾ ಸದಸ್ಯ ಟಿ.ಎಂ.ನಂಜುಂಡ ಸ್ವಾಮಿ ಮುಖಂಡರಾದ ಹೆಮ್ಮಿಗೆ ಶೇಷಾದ್ರಿ, ಅಕ್ಕೂರು ಗುರು ಮೂರ್ತಿ, ಮರಿಡಿಪುರ ಗೋಪಾಲ್,ಬನ್ನೂರು ಶಿವು,
ಪಿ.ಎ.ಬಸವರಾಜು ಮೂಗೂರು ಸಾಗರ್, ಶ್ರೀರಾಮಪುರ ಬೀದಿ ಮಣಿ ಕಂಠ ರಾಜು , ಉಕ್ಕಲಗೇರೆ ರಾಜು,ಹಿರಿಯೂರು ಸೋಮಣ್ಣ ಮತ್ತಿತರರು ಹಾಜರಿದ್ದರು.