ಮೆಥೆನಾಲ್ ಟ್ಯಾಂಕರ್ ಪಲ್ಟಿ. ಸಂಚಾರಕ್ಕೆ ವ್ಯತ್ಯಯ


ಆಲೂರು: ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮೆಥೆನಾಲ್ ತುಂಬಿದ ಲಾರಿಯೊಂದು ಪಲ್ಟಿಯಾಗಿ ಸಂಚಾರಕ್ಕೆ ತೊಂದರೆಯಾದ ಘಟನೆ ನಡೆದಿದೆ..
ಮಂಗಳೂರಿನಿಂದ ಹಾಸನಕ್ಕೆ ಮೆಥೆನಾಲ್ ತುಂಬಿಕೊಂಡು ಬರುತ್ತಿದ್ದ ಟ್ಯಾಂಕರ್ ಲಾರಿ, ಪಾಳ್ಯ ಬಳಿ ಹೊನ್ನೇನಹಳ್ಳಿ ಬಳಿ ಪಲ್ಟಿಯಾಗಿದ್ದು ಸಾವಿರಾರು ಲೀ. ಮೆಥೇನಾಲ್ ಮಣ್ಣುಪಾಲಾಗಿದೆ.  
ಈ ಸಂದರ್ಭದಲ್ಲಿ ಟ್ಯಾಂಕ್​ನಿಂದ ಸೋರಿಕೆಯಾಗುತ್ತಿದ್ದ ಮೆಥೇನಾಲನ್ನು ತುಂಬಿಕೊಳ್ಳಲು ಸ್ಥಳೀಯರು ಓಡಾಡುತ್ತಿದ್ದುದರಿಂದ ಕೆಲ ಕಾಲ ಹೆದ್ದಾರಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಅಗ್ನಿ ಶಾಮಕ ದಳ, ಪೆÇಲೀಸರು ಸ್ಥಳಕ್ಕೆ ತೆರಳಿ ಅಗ್ನಿ ಅವಘಡ ಸಂಭವಿಸದಂತೆ ಎಚ್ಚರಿಕೆ ವಹಿಸಿ ರಸ್ತೆಯಲ್ಲಿ ಹರಿಯುತ್ತಿದ್ದ ಮೆಥೇನಾಲ್‍ನ್ನು ಚರಂಡಿಗೆ ಹರಿಯುವಂತೆ ಮಾಡಿ ಲಾರಿಗೆ ಸೂಕ್ತ ರಕ್ಷಣೆ ಒದಗಿಸಿ   ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಪೊಲೀಸ್ ಇನ್ಸ್‍ಪೆಕ್ಟರ್ ವೆಂಕಟೇಶ್ ಸಿಬ್ಬಂದಿ ತೆರಳಿ, ಬದಲಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು. ಮೆಥೆನಾಲ್ ಸೋರಿಕೆ ನಿಂತ ನಂತರ ಲಾರಿಯನ್ನು ಮೇಲೆತ್ತಲು ಕ್ರಮ ಕೈಗೊಳ್ಳುವುದಾಗಿ ಮೂಲಗಳು ತಿಳಿಸಿವೆ.

Post a Comment

Previous Post Next Post