ಹುಣಸೂರು : ಕೆ.ಆರ್. ನಗರ ಪುರಸಭೆ ಮುಖ್ಯಾಧಿಕಾರಿ ಶಿವಣ್ಣ ಕೆ.ಆರ್.ನಗರದ ಪತ್ರಕರ್ತರನ್ನು ನಿಂಧಿಸಿರುವುದನ್ನು ವಿರೋಧಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹುಣಸೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತಹಶೀಲ್ದಾರ್ ಬಸವರಾಜು ರವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಕುಮಾರ್, ಕೆ.ಆರ್.ನಗರ ಪಟ್ಟಣ ಪುರಸಭೆಯ ಭ್ರಷ್ಠಾಚಾರ ಹಾಗೂ ಭೂ ಹಗರಣ ಸಂಬಂಧಿಸಿದಂತೆ ಬಿಜೆಪಿ ಅಧ್ಯಕ್ಷ ಕೃಷ್ಣ ಭಟ್‍ರವರ ದೂರಿಗೆ ಸಂಬಂಧಿಸಿ ಪೌರಾಡಳಿತ ಸಚಿವರ ಸೂಚನೆ ಮೇರೆಗೆ ತನಿಖಾ ತಂಡ ತನಿಖೆ ನಡೆಸಲು ಬಂದಾಗ ವರದಿ ಮಾಡಲು ತೆರಳಿದ ಅಲ್ಲಿನ ಸ್ಥಳೀಯ ಪತ್ರಕರ್ತರ ಮೇಲೆ ಪುರಸಭಾ ಮುಖ್ಯಾಧಿಕಾರಿ ಕೆ.ಶಿವಣ್ಣ ಏಕವಚನದಲ್ಲಿ ಸಾರ್ವಜನಿಕವಾಗಿ ನಿಂದಿಸುವ ಜೊತೆ ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಖಂಡನೀಯ ಹಾಗೂ ಪತ್ರಕರ್ತರ ವಿರುದ್ಧವೆ ಸುಳ್ಳು ದೂರು ನೀಡಿ ನೈತಿಕ ಸ್ಥೈರ್ಯ ಕುಂದಿಸಲು ಹೊರಟಿರುವುದು ಸಾಂವಿಧಾನಿಕ ಕಗ್ಗೊಲೆ ಎಂದರು.
ಈ ಸಂಧರ್ಬದಲ್ಲಿ ಪತ್ರಕರ್ತರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ದಾ.ರಾ.ಮಹೇಶ್, ನಗರ ಕಾರ್ಯದರ್ಶಿ ಸಂಪತ್, ಜಿಲ್ಲಾ ಪತ್ರಕರ್ತರ ಸಂಘದ ಗ್ರಾಮಾಂತರ ಕಾರ್ಯದರ್ಶಿ ಧರ್ಮಾಪುರ ನಾರಾಯಣ, ನಿರ್ದೇಶಕರುಗಳಾದ ಸಚಿತ್, ಹೆಚ್.ಎಸ್.ಗಜೇಂದ್ರ, ಚೆಲುವರಾಜು, ಸ್ವಾಮಿಗೌಡ, ನೇರಳಕುಪ್ಪೇ ಮಹದೇವ, ಮೊಹಮದ್ ರಫೀಕ್, ಖಜಾಂಚಿ ಹೆಚ್.ಆರ್. ಕೃಷ್ಣ ಕುಮಾರ್, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರುಗಳಾದ ಹೆಚ್.ಕೆ.ಕೃಷ್ಣ, ಹನಗೋಡು ನಟರಾಜ್, ಪ್ರತಾಪ್, ರಘು, ಭಾಸ್ಕರ್, ಯೋಗಾನಂದ್, ಇ-ಡಿಜಿಟಲ್ ನಾಗರಾಜ್, ಮೂರ್ತಿ ಹಾಗೂ ಇತರರು ಹಾಜರಿದ್ದರು.