ಹುಣಸೂರು ಆ16 : ಬೈಕ್‍ನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಹುಣಸೂರು ಅಬಕಾರಿ ಆಧಿಕಾರಿಗಳು ತಾಲೂಕಿನ ಸಂತೆಕೆರೆ ಬಳಿ ಬಂಧಿಸಿದ್ದಾರೆ.
ತಾಲೂಕಿನ ರತ್ನಪುರಿ ವಾಸಿ ಮುಭಾರಕ್ ಬಂಧಿತ ಆರೋಪಿ. ಈತ ನಿಂದ ಒಣಗಿಸಿದ 410 ಗ್ರಾಂ ಗಾಂಜಾ ವಶಪಡಿಸಿಕೊಂಡು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈತ ಬೆರೆಕಡೆ ಮಾರಾಟ ಮಾಡಲು ಬೈಕ್ ನಲ್ಲ ಗಾಂಜಾ ಕೊಂಡು ಹೋಗುವಾಗ ಬಂದ ಖಚಿತ ಮಾಹಿತಿ ಮೆರೆಗೆ ಅಬಕಾರಿ ಆಧಿಕರಿಗಳು ಹೊಂಚಿ ಹಾಕಿ ರತ್ನಪುರಿ ಬಳಿಯ ಸಂತೆಕೆರೆ ಕೋಡಿ ಬಳಿ ಅರೋಪಿಯನ್ನು ಮಲು ಸಮೇತ ಬಂಧಿಸಿ ವಶಕ್ಕೆ ಪಡೆಯಲಾಗಿದೆ ಎಂದು ಅಬಕಾರಿ ನಿರೀಕ್ಷಕ ಧರ್ಮರಾಜ್ ತಿಳಿಸಿದರು.
ಅರೋಪಿಯನ್ನು ಮಾಲು ಸಮೇತ ಬಂಧಿಸಿರುವ ಅಧಿಕಾರಿಗಳು ಹಾಗೂ ಸಿಬ್ಬಂಧಿ ಕ್ರಮವನ್ನು ಅಬಕಾರಿ ಉಪಯುಕ್ತ ಮಹದೇವಿಬಾಯಿ ಪ್ರಶಂಸಿದ್ದಾರೆ.
ಈ ಕಾರ್ಯಚರಣೆಯಲ್ಲಿ ಅಬಕಾರಿ ಡಿ ವೈ ಎಸ್ ಪಿ , ಶ್ರೀನಿವಾಸ್, ನಿರೀಕ್ಷಕ ನಟರಾಜ್, ಸಿಬ್ಬಂದಿಗಳಾದ ಮಂಜುನಾಥ್ , ಅಜೇಯ್‍ಕುಮಾರ್, ಚಾಲಕ ರಾಮಚಂದ್ರ ಭಾಗವಹಿಸಿದ್ದರು.