ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಹೈಕೋರ್ಟ್ ತಡೆ-ಮೀಸಲಾತಿ ಪುನರ್ ಪರಿಶೀಲನೆಗೆ ಎರಡು ವಾರ ಗಡುವು
ಹಾಸನ:ಜಿಲ್ಲೆಯ ಎರಡು ನಗರಸಭೆ ಅಧ್ಯಕ್ಷಸ್ಥಾನ ಗಿಟ್ಟಿಸಿಕೊಂಡು ಚುನಾವಣೆಗೂ ಮುನ್ನಾ ಸಂಭ್ರಮದಲ್ಲಿದ್ದ ಬಿಜೆಪಿಗೆ ನಿರಾಶೆಯಾಗಿದೆ.
ಇಂದು(ಅ.16)ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗಧಿಯಾಗಿತ್ತು. ಆದರೆ ಜೆಡಿಎಸ್ ಮೀಸಲಾತಿ ಯಲ್ಲಿ ಅನ್ಯಾಯವಾಗಿದೆ ಎಂದು ದೂರಿ ಕೋರ್ಟ್ ಮೋರೆ ಹೋಗಿತ್ತು ವಿಚಾರಣೆ ನಡೆಸಿರುವ ಹೈಕೋರ್ಟ್ ಮೀಸಲಾತಿ ಪುನರ್ ಪರಿ ಶೀಲನೆಗೆ ಅವಕಾಶ ನೀಡಿ ಎರಡು ವಾರ ಗುಡುವು ನೀಡಿ ಚುನಾವಣೆಗೆ ತಡೆ ನೀಡಿದೆ. ಕಡಿಮೆ ಸದಸ್ಯರನ್ನು ಹೊಂದಿದ್ದ ಬಿಜೆಪಿ ಅಧಿಕಾರ ಗದ್ದುಗೆ ಏರಲು ಎಲ್ಲಾ ಸಿದ್ದತೆ ಮಾಡಿಕೊಂಡು ಚುನಾವಣೆಗೂ ಮುನ್ನಾ ಸಂಭ್ರಮದಲ್ಲಿತ್ತು. ಇದಕ್ಕೆ ಜೆಡಿಎಸ್ ತಣ್ಣೀರು ಎರೆಚಿದೆ ಎಂದು ಹೇಳಬಹುದು.
ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಲಾಗಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಆದರೆ ಹಾಸನ ಮತ್ತು ಅರಸೀಕೆರೆ ನಗರ ಸಭೆಯಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಬಿಜೆಪಿಯಲ್ಲಿ ಮಾತ್ರ ಇದ್ದರಿಂದ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳುವ ಕಾಲ ಬಿಜೆಪಿಗೆ ಸನ್ನಿಹವಾಗಿತ್ತು.ಇದಕ್ಕೆ ಕೋರ್ಟ್ ಬ್ರೇಕ್ ಹಾಕಿದೆ.ಮೀಸಲಾತಿ ವಿಚಾರದಲ್ಲಿ ಎರಡು ಪಕ್ಷಗಳ ನಾಯಕರ ನಡುವೆ ಪರ ವಿರುದ್ದ ಆರೋಪ ಪ್ರತ್ಯಾರೋಪ ನಡೆ ಯುತ್ತಿತ್ತು. ಅರಸೀಕೆರೆ ನಗರ ಸಭೆಯ ಒಟ್ಟಾರೆ 31 ಸ್ಥಾನಗಳಲ್ಲಿ 22 ಸ್ಥಾನಗಳಲ್ಲಿ ಗೆಲವು ಸಾಧಿಸಿರುವ ಜೆಡಿಎಸ್ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವ ದುರಾ ದೃಷ್ಟ ಎದು ರಾಗಿತ್ತು. ಅಧ್ಯಕ್ಷ ಮೀಸಲಾತಿ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದರಿಂದ ಕೇವಲ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಅಧಿಕಾರದ ಕನಸು ಕಂಡಿತ್ತು. ಸದ್ಯಕ್ಕೆ ಬಿಜೆಪಿ ಕನಸು ಭಗ್ನವಾಗಿದೆ. ಹಾಸನ ನಗರ ಸಭೆಯಲ್ಲಿ 35 ವಾರ್ಡ್ ಗಳಿದ್ದು, ಜೆಡಿಎಸ್17,ಬಿಜೆಪಿ 13, ಕಾಂಗ್ರೆಸ್ 2, ಪಕ್ಷೇತರ ಅಭ್ಯರ್ಥಿಗಳು 2ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು.ಆದರೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸ ಲಾಗಿರುವುದರಿಂದ ಈ ಸ್ಥಾನಕ್ಕೆ ಜೆಡಿಎಸ್‍ನಲ್ಲಿ ಯಾರು ಇಲ್ಲದ ಕಾರಣ ಬಿಜೆಪಿ ಅಧಿಕಾರ ಹಿಡಿ ಯುವುದು ನಿಶ್ಚಿತವಾಗಿತ್ತು. ಉಪಾಧ್ಯಕ್ಷ ಸ್ಥಾನ ಬಿಸಿಎಂ ಮಹಿಳೆಗೆ ಮೀಸಲಾಗಿರು ವುದ ರಿಂದ ಎರಡು ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿತ್ತು. ಇದಕ್ಕೆಲ್ಲ ಹೈಕೋರ್ಟ್ ಆದೇಶ ಹಲವು ದಿನಗಳ ಸದಸ್ಯರ ಆಸೆಗೆ ಮತ್ತೆ ನಿರಾಶೆ ಉಂಟು ಮಾಡಿದೆ.ಎರಡು ನಗರಸಭೆ ಯಾವ ಪಕ್ಷದ ಪಾಲಾಗು ತ್ತವೆಯೋ ಮತ್ತೆ ಕಾದುನೋಡ ಬೇಕಾಗಿದೆ.