ಕೊಣನೂರು: ಪಟ್ಟಣದ ಸಹಿಪ್ರಾ ಶತಮಾನದ ಶಾಲೆಯನ್ನು ಹಳೆಯ ವಿದ್ಯಾರ್ಥಿಗಳ ವೇದಿಕೆಯವರು ಅತ್ಯು ತ್ತಮ ರೀತಿಯಲ್ಲಿ ಪುನರ್ ನವೀಕರಣ ಗೊಳಿಸಿದ್ದು ಇದರ ಸದುಪಯೋಗ ವನ್ನು ಗ್ರಾಮೀಣ ಭಾಗದ ಮಕ್ಕಳು ಪಡೆದುಕೊಂಡು ಉನ್ನತ ಮಟ್ಟಕ್ಕೆ ಏರ ಬೇಕೆಂದು ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದರು.
ಇಲ್ಲಿನ ಸಹಿಪ್ರಾ ಶಾಲೆಯ ಆವರಣದಲ್ಲಿ ಕೆ.ಶಿಪ್ ವತಿಯಿಂದ 19 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸ ಲಾಗುವ ಹೈಟೆಕ್ ಶೌಚಾಲಯ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಹಳೆಯ ವಿದ್ಯಾರ್ಥಿಗಳು ಪುನರ್ ನವೀಕರಿಸಿರುವ ಕೊಠಡಿಗಳನ್ನು ವೀಕ್ಷಿಸಿ ಮಾತನಾಡಿದರು.
ಯಾವುದೇ ಖಾಸಗಿ ಶಾಲೆಗೆ ಕಮ್ಮಿಯಿಲ್ಲ ಎನ್ನುವಂತೆ ಸರ್ಕಾರಿ ಶಾಲೆಯನ್ನು ಹಳೆಯ ವಿದ್ಯಾರ್ಥಿಗಳ ವೇದಿಕೆಯವರು ನವೀಕರಿಸಿದ್ದು ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ದಾಖಲಾತಿ ಪಡೆದು ಅವರ ಕಾರ್ಯಕ್ಕೆ ಪ್ರತಿಫಲ ಸಿಗುವಂತೆ ಮಾಡಬೇಕು. ಈ ಶಾಲೆಗೆ ಆರನೇ ತರಗತಿಗೆ ಈಗಾಗಲೇ ಆಂಗ್ಲಮಾಧ್ಯಮ ದೊರೆತಿದ್ದು ಸದ್ಯದಲ್ಲೇ ಒಂದನೇ ತರಗತಿಗೂ ಆಂಗ್ಲ ಮಾಧ್ಯ ಮ ದೊರೆಯಲಿದೆ. ಅಲ್ಲದೇ ಈಗಾ ಗಲೇ ಹಳೆಯ ವಿದ್ಯಾರ್ಥಿಗಳ ವೇದಿಕೆ ಯವರು ಎಲ್‍ಕೆಜಿ, ಯುಕೆಜಿಯನ್ನೂ ಪ್ರಾರಂಭಿಸುವ ಮೂಲಕ ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆಗಳಿ ಗಿಂತಲೂ ಬಹಳ ಅಂದವಾಗಿ ಮಾಡಿದ್ದಾರೆ ಎಂದರು.
ಹಳೆಯ ವಿದ್ಯಾರ್ಥಿಗಳ ವೇದಿಕೆ ಯವರು ಸಹಿಪ್ರಾ ಶಾಲೆಯ ಇನ್ನೂ ಕೆಲವು ಕೊಠಡಿಗಳು ಶಿಥಿಲವಾಗಿರುವು ದರಿಂದ ಅವುಗಳನ್ನು ಪುನರ್ ನವೀಕ ರಿಸಲು ಅನುದಾನ ಒದಗಿಸಿಕೊಡ ಬೇಕೆಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಈ ಸಂಬಂಧ ಬಿಇಒ ರವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಳೆಯ ವಿದ್ಯಾರ್ಥಿಗಳ ವೇದಿ ಕೆಯ ಅಧ್ಯಕ್ಷ ಕೆ.ಟಿ. ಲೋಕೇಶ್, ಕಾರ್ಯ ದರ್ಶಿ ಕೆ.ಆರ್. ರತ್ನಕುಮಾರ್, ಖಜಾಂಚಿ ಕೆ.ಆರ್. ಶ್ರೀನಿವಾಸ್, ಪದಾಧಿಕಾರಿಗಳಾದ ಕೆ.ವಿ. ಸತೀಶ್, ಸಿದ್ದರಾಮೇಗೌಡ, ಬಾಬಣ್ಣ, ನಜೀ ಬ್, ಸಂತೋಷ್, ಅಶ್ವಿನ್, ತಾ.ಪಂ ಸದಸ್ಯ ಇಮ್ರಾನ್ ಮೊಖ್ತಾ ರ್, ಗ್ರಾ.ಪಂ ಅಧ್ಯಕ್ಷ ಕೆ.ಬಿ. ರಮೇಶ್, ಗ್ರಾ.ಪಂ ಸದಸ್ಯ ರುಗಳು, ಬಿಇಒ ಶಿವನಂಜೇಗೌಡ, ತಹಸೀಲ್ದಾರ್ ವೈ.ಎಂ.ರೇಣು ಕುಮಾರ್, ತಾ.ಪಂ ಇಒ ರವಿಕು ಮಾರ್, ಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಉಪಸ್ಥಿತರಿದ್ದರು.