ಕೆ.ಆರ್.ನಗರ: ರೈತರಿಗೆ ಸಿಗುವ ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ರೈತ ವಿದ್ಯಾರ್ಥಿ ಮುಖಂಡ ಅರ್ಜುನಹಳ್ಳಿ ರಾಮಪ್ರಸಾದ್ ರೈತರಿಗೆ ಸಲಹೆ ನೀಡಿದರು.
ಪಟ್ಟಣದ ಕೃಷಿ ಇಲಾಖೆಯ ಸಮೀಪದಲ್ಲಿರುವ ಮಹಾತ್ಮ ಗಾಂಧಿ ಟ್ರಸ್ಟ್ ಹಾಗೂ ಜಲಾನಯನ ಮತ್ತು ಕೃಷಿ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರೈತ ಉತ್ಪಾದಕ ಸದಸ್ಯರಿಗೆ ಸಾಮಥ್ರ್ಯ ಅಭಿವೃದ್ಧಿ ತರಭೇತಿ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸರ್ಕಾರದಿಂದ ಸಿಗುವ ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ವಿಶ್ವವ್ಯಾಪಿ ಕೊರೋನಾ ಸಂಕಷ್ಟದಲ್ಲಿ ನಲುಗಿದ್ದ ರೈತರು ಹಾಗೂ ಉತ್ತರ ಕರ್ನಾಟಕದಲ್ಲಿ ಕುಂಭದ್ರೋಣ ಮಳೆಗೆ ರೈತರು ಮತ್ತು ಜಾನುವಾರುಗಳು ಮಳೆಯೊಂದಿಗೆ ನಲುಗಿದ್ದು ಸರ್ಕಾರ ರೈತರಿಗೆ ಮತ್ತು ಜಾನುವಾರುಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕೆಂದು ಅವರು ಸರ್ಕಾರ ರಾಷ್ಟ್ರೀಯ ಮೀಷನ್ ಯೋಜನೆಯಡಿಯಲ್ಲಿ ರೈತರಿಗೆ ಅನುಕೂಲವಿದ್ದು ಶೇ.90ರಷ್ಟು ಸಹಾಯಧನ ಪಡೆಯಬಹುದು ರೈತರು ಇದರ ಸದಯಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಸನ್ನ, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಪ್ರಸಾದ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಎನ್.ಸಿ. ಪ್ರಸಾದ್, ಗಾಂಧಿ ಟ್ರಸ್ಟ್ ಅಧ್ಯಕ್ಷ ಆದಿಶೇಷನ್, ರೈತ ಮುಖಂಡ ಎಲ್.ಪಿ.ರವಿಕುಮಾರ್, ಸೇರಿದಂತೆ ಹಲವಾರು ಹಾಜರಿದ್ದರು.