ಹಾಸನ,ಅ.13:- ಹಾಸನ ಹಾಲು ಒಕ್ಕೂಟವು ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ 1,504 ಹಾಲು ಉತ್ಪಾದಕ ಸಹಕಾರ ಸಂಘಗಳನ್ನು ಹೊಂದಿದ್ದು, ಸುಮಾರು 3 ರಿಂದ 3.5 ಲಕ್ಷ ಹೈನುರಾಸು ಹೊಂದಿರುತ್ತದೆ. ಪಶುಸಂಗೋಪನೆ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಜಾನುವಾರುಗಳಿಗೆ ಸಮಗ್ರ ಕಾಲು ಮತ್ತು ಬಾಯಿ ಜ್ವರದ ಲಸಿಕೆಯನ್ನು ಅ.12 ರಿಂದ ಹಮ್ಮಿಕೊಳ್ಳಲಾಗಿದ್ದು, ಅಂದಾಜು 40-45 ದಿನಗಳವರೆಗೆ ಲಸಿಕಾ ಕಾರ್ಯಕ್ರಮ ಪ್ರಗತಿಯಲ್ಲಿರುತ್ತದೆ.
ಹಾಸನ ಹಾಲು ಒಕ್ಕೂಟದ ವತಿಯಿಂದ ಹಾಸನ ಜಿಲ್ಲೆಗೆ 30 ವಾಹನಗಳ ವ್ಯವಸ್ಥೆ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ 22 ವಾಹನಗಳ ವ್ಯವಸ್ಥೆ ಹಾಗೂ ಮಡಿಕೇರಿ ಜಿಲ್ಲೆಗೆ 8 ವಾಹನಗಳ ವ್ಯವಸ್ಥೆ ಒಟ್ಟಾರೆಯಾಗಿ 60 ವಾಹನಗಳನ್ನು ಕಾರ್ಯಕ್ರಮಕ್ಕೆ ಒದಗಿಸಲಿದೆ. ಎಲ್ಲಾ ಹಾಲು ಉತ್ಪಾದಕರು ಈ ಸೌಲಭ್ಯವನ್ನು ಪಡೆದುಕೊಂಡು ಕಾಲು ಮತ್ತು ಬಾಯಿ ಜ್ವರ ರೋಗದಿಂದ ಜಾನುವಾರುಗಳನ್ನು ರಕ್ಷಿಸುವಂತೆ ಹಾಸನ ಸಹಕಾರಿ ಹಾಲು ಒಕ್ಕೂಟಕ ವ್ಯವಸ್ಥಾಪಕರು ಕೋರಿದ್ದಾರೆ.
Tags
ಹಾಸನ