ಬಿಜೆಪಿ ಅಭ್ಯರ್ಥಿಯ ಜಾತಿಪ್ರಮಾಣ ದಾಖಲಾತಿಯೇ ಬೋಗಸ್ ಹೆಚ್. ಡಿ. ರೇವಣ್ಣ ಗಂಭೀರ ಆರೋಪ

ಹಾಸನ: ಹಾಸನ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯು ಇಂದು ಶುಕ್ರವಾರದಂದು ನಡೆಯಲಿದ್ದು, ಬಿಜೆಪಿಯವರು ಅಭ್ಯರ್ಥಿಯ ದಾಖಲೆಯನ್ನೇ ತಿದ್ದುಪಡಿ ಮಾಡಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ಗಂಭೀರವಾಗಿ ಆರೋಪಿಸುವ ಮೂಲಕ ನಗರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ವಿವಾದಕ್ಕೆ ಎಡೆ ಮಾಡಿಕೊಟ್ಟಿತು.
​ ​ ​ ​ ​ ​ ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಹಾಸನ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಬಿಜೆಪಿಯವರು ಎಸ್.ಟಿ ದಾಖಲಾತಿಯನ್ನೇ ತಿದ್ದುಪಡಿ ಮಾಡಿದ್ದಾರೆ. ಈ ಸರಕಾರವು ಯಾವುದನ್ನು ಬೇಕಾದರೂ ಬದಲಾವಣೆ ಮಾಡುತ್ತದೆ. ಎಸ್.ಟಿ ಜನಾಂಗದ ದಾಖಲಾತಿ ಈಗಾಗಲೇ ಪ್ರಕರಣ ತನಿಖೆಯಲ್ಲಿದ್ದು, ಈ ಕೇಸ್ ಇನ್ನೂ ಪೆಂಡಿಂಗ್ ಇದೆ. ಆದ್ರೆ ಈ ಸ್ಥಾನ ಖಾಲಿ ಉಳಿಸಿಕೊಂಡು ಉಳಿದ ಸ್ಥಾನಕ್ಕೆ ಚುನಾವಣೆ ಮಾಡಬೇಕೆಂದು​ ಒತ್ತಾಯಿಸಿದರು. ಹಾಸನ ನಗರಸಭೆ ಅಧ್ಯಕ್ಷ ಸ್ಥಾನ ಎಸ್.ಟಿಗೆ ಮೀಸಲಾತಿ ನಿಗದಿಯಾಗಿದೆ. ಆದರೇ ಬಿಜೆಪಿಯಲ್ಲಿ ಮಾತ್ರ ಓರ್ವ ಎಸ್.ಟಿ ಅಭ್ಯರ್ಥಿ ಇದ್ದಾರೆ. ಇವರಿಗೆ ಅಧ್ಯಕ್ಷ ಸ್ಥಾನ ದಕ್ಕಬೇಕೆಂದು ಸದಸ್ಯತ್ವವನ್ನೇ ಬೋಗಸ್ ಮಾಡಿದ್ದು, ಈ ಬಗ್ಗೆ ಉಪವಿಭಾಗ ದೀಕಾರಿಗಳಿಗೆ ದೂರು ಬರೆದರೂ ಇದುವರೆಗೂ ಯಾವ ಕ್ರಮ ಜರುಗಿಸಿರುವುದಿಲ್ಲ. ಬಿಜೆಪಿ ಅಭ್ಯರ್ಥಿ ಮೋಹನ್ ಸನ್ ಆಫ್ ರಘುಪತಿ ರಾವ್ ಮರಾಠ ಇದ್ದುದನ್ನು ಗೋಂಡ ಎಂದು ಬದಲಾಯಿಸಲಾಗಿದೆ. ಈ ಬಗ್ಗೆ ಇಷ್ಟೊತ್ತಿಗೆ ಕೇಸು ದಾಖಲಿಸಬೇಕಾಗಿತ್ತು. ಜಿಲ್ಲಾಧಿಕಾರಿಗಳಿಗೆ ದೂರು ಕೊಟ್ಟರೂ ಏನು ಮಾಡುತ್ತಿದ್ದಾರೆ? ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಹಾಗೂ ಎಸಿಗೆ ಪತ್ರ ಬರೆಯಲಾಗಿದ್ದರೂ ಯಾವ ಪ್ರಯೋಜವಾಗಿರುವುದಿಲ್ಲ. ದಾಖಲೆ ತಿದ್ದುವ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಮಾತಿನ ಸಮರ ನಡೆಸಿದರು.

​ ​ ​ ​ ​ ನಾನು ಯಾವುದಕ್ಕೂ ಹೆದರುವುದಿಲ್ಲ ಎಲ್ಲಾವನ್ನು ನೇರವಾಗಿಯೇ ಹೇಳುತ್ತೇನೆ. ಇನ್ನು ಕಳೆದ ೬ ತಿಂಗಳ ಹಿಂದೆಯೇ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಬೇಕಾಗಿತ್ತು. ಆದರೇ ಇಷ್ಟು ತಡವಾಗಿದೆ. ಈ ರೀತಿ ನಮ್ಮ ಆಡಳಿತವು ಹಾಸನ ಜಿಲ್ಲೆಯಲ್ಲಿ ಇದೆ. ಅಧಿಕಾರಿಗಳು ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಲ್ಲಾ ಗಮನಿಸಿ ಮುಂದೆ ನಾವುಗಳು ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು. ರಾಜ್ಯದಲ್ಲಿರುವ ಚುನಾವಣಾ ಆಯೋಗ ಕೂಡ ರಬ್ಬರ್ ಸ್ಟಾಂಪ್ ಇದ್ದಾಗೆ. ಆಯೋಗವು ವಿಫಲವಾಗಿ ಎಲ್ಲಾ ಆಡಳಿತವಾಗಿ ಮಾರ್ಪಟ್ಟಿದೆ ಎಂದು ಕಿಡಿಕಾರಿದರು. ನಮ್ಮ ಏರಿಯಾದಲ್ಲಿ ಮತ್ತು ಅಕ್ಕಪಕ್ಕ ವೀರಶೈವ ಲಿಂಗಾಯತ ಜನಾಂಗ ಇದ್ದರೂ ಕೂಡ ನಮ್ಮ ಮನೆಯ ಏರಿಯಾದಲ್ಲೇ ಗ್ರಾಪಂ, ಚುನಾವಣೆಗೆ ಎಸ್.ಟಿಗೆ ಮೀಸಲಾತಿ ಮಾಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರೇ ನಿಮ್ ಜನಾಂಗದವರೇ ಇದ್ದರೂ​ ಇಲ್ಲಿ ಎಸ್.ಟಿ ಗೆ ಮೀಸಲಾತಿ ನಿಗದಿ ಮಾಡಿರುವುದು ತಿಳಿದಿಲ್ಲವೇ ಎಂದು ಪ್ರಶ್ನೆ ಮಾಡಿದರು.

​ ​ ​ ​ ​ ​ ​ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಹೆಚ್.ಪಿ. ಸ್ವರೂಪ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್. ಶಂಕರ್ ಇತರರು ಉಪಸ್ಥಿತರಿದ್ದರ

Post a Comment

Previous Post Next Post