ಹಾಸನ ನಗರಕ್ಕೆ ಸಮೀಪವಿರುವ ತಟ್ಟೆಕೆರೆ ಗ್ರಾಮಪಂಚಾಯತಿ ವ್ಯಾಪ್ತಿಯ ದೇವೇಗೌಡ ನಗರದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ಕಟ್ಟಲಾಗಿತ್ತು, ಪಂಚಾಯತಿಯ ಪಿಡಿಓ ಮೋಹನ್ ಅವರು ಕಾರ್ಯಚರಣೆ ನಡೆಸಿ, ಆ ಮನೆಗಳೆಲ್ಲವನ್ನು ತೆರವುಗೊಳಿಸಿದ್ದಾರೆ.
ಕೆಲವು ಪ್ರಭಾವಿಗಳು ಆ ಜಾಗವನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಮನೆಗಳನ್ನು ಕಟ್ಟಲಾಗಿತ್ತು, ಆ ಜಾಗ ಸರ್ಕಾರಿ ಜಾಗವಾಗಿದ್ದು, ಸಾರ್ವಜನಿಕ ಗ್ರಂಥಾಲಯದ ಕಟ್ಟಡಕ್ಕಾಗಿ ಮೀಸಲಿರಿಸಲಾಗಿತ್ತು ಆದರೂ ಆ ಜಾಗದಲ್ಲಿ ಮನೆಗಳನ್ನು ಕಟ್ಟಿ ಅಕ್ರಮ ಮಾಡಲಾಗಿತ್ತು, ಇದೀಗ ತಟ್ಟೆಕೆರೆ ಗ್ರಾಮಪಂಚಾಯತಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಕಟ್ಟಲಾಗಿದ್ದ ಆ ಮನೆಗಳನ್ನು ತೆರವುಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೀಗೆ ಕಾರ್ಯಚರಣೆ ನಡೆಸಿ ಸಾರ್ವಜನಿಕ ಗ್ರಂಥಾಲಯ ಕಟ್ಟಡಕ್ಕಾಗಿ ಆ ಸ್ಥಳವನ್ನು ಉಳಿಸಿಕೊಂಡಿದ್ದು ದೇವೇಗೌಡ ನಗರದ ನಿವಾಸಿಗಳಿಗೆ ಸಂತಸ ತಂದಿದೆ, ಆ ನಿಟ್ಟಿನಲ್ಲಿ ಇಂದು ಯುವಮುಖಂಡ ಜೀವನ್ ಅವರ ನೇತೃತ್ವದಲ್ಲಿ ದೇವೇಗೌಡ ನಗರದ ಮುಖಂಡರು ಹಾಗೂ ನಿವಾಸಿಗಳು ಇಂದು ತಟ್ಟೆಕೆರೆ ಗ್ರಾಮಪಂಚಾಯತಿಗೆ ಭೇಟಿ ಕೊಟ್ಟು, PDO ಮೋಹನ್ ಅವರನ್ನು ಸನ್ಮಾನಿಸಿದ್ದಾರೆ ಹಾಗೂ ಅವರ ಕಾರ್ಯವೈಖರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಾರಿಹಳ್ಳಿ ರಮೇಶ್, ತಟ್ಟೆಕೆರೆ ಗಿರೀಶ್, ದೇವೇಗೌಡ ನಗರದ ಹರೀಶ್, ಪದ್ಮ, ಪ್ರೇಮ ಮತ್ತು ಪ್ರೇಯ ಇನ್ನಿತರರು ಹಾಜರಿದ್ದರು
Tags
ಹಾಸನ