ಮಹಾನಾಯಕ'ಧಾರಾವಾಹಿಯ ಫ್ಲೆಕ್ಸ್ ಹರಿದು ಭಗ್ನಗೊಳಿಸಿರುವ ಘಟನೆ : ವಿರೋಧಿಸಿ ಪ್ರತಿಭಟನೆ





ತಿ.ನರಸೀಪುರ.ನ.05:-ಮಾನವತಾವಾದಿ ಡಾ. ಬಿ. ಆರ್. ಅಂಬೇಡ್ಕರ್ ರವರ ಜೀವನ ಆಧಾರಿತ 'ಮಹಾನಾಯಕ'ಧಾರಾವಾಹಿಯ ಫ್ಲೆಕ್ಸ್ ಹರಿದು ಭಗ್ನಗೊಳಿಸಿರುವ ಘಟನೆ ತಾಲ್ಲೂಕಿನ ನಾಗಲಗೆರೆ ಗ್ರಾಮದಲ್ಲಿ ನಡೆದು ನಾಲ್ಕು ದಿನ ಕಳೆದರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ಅನುಸರಿಸುರುವ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣಾಧಿಕಾರಿಗಳ ಮೇಲೆ ಕ್ರಮ ವಹಿಸುವಂತ್ತೆ ಒತ್ತಾಯಿಸಿ ಪ್ರತಿಭಟನೆ ನೆಡಯಿತು.

 ಪಟ್ಟಣದ ಮಿನಿ ವಿಧಾನ ಸೌಧದ ಮುಂಭಾಗ ಜಮಾಯಿಸಿದ ತಾಲ್ಲೂಕು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮಾವಳ್ಳಿ ಶಂಕರ್ ಬಣ ಘಟನೆ ಬಗ್ಗೆ ತಾಲ್ಲೂಕು ಆಡಳಿತ ಗಮನ ಹರಿಸಿದೆ ಪ್ರಕರಣವನ್ನು ಹಗುರವಾಗಿ ಪರಿಗಣಿಸಿರುವುದು ಖಂಡನೀಯ ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮವಹಿಸಬೇಕೆಂದು ಒತ್ತಾಯಿಸಿದರು.

ಪ್ರತಿ ಭಟನೆಯ ನೇತೃತ್ವವಹಿಸಿ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಬನ್ನಹಳ್ಳಿ ಸೋಮಣ್ಣ ಮಹಾನಾಯಕ ಧಾರಾವಾಹಿಯ ಫ್ಲೆಕ್ಸ್ ವಿರೂಪಗೊಳಿಸಿದ ಕಿಡಿಗೇಡಿಗಳ ಕೃತ್ಯದಿಂದ ಗ್ರಾಮದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ ಹಾಗೂ ಗ್ರಾಮದಲ್ಲಿ ಜನರು ಭಯ ಬೀತಿಯನ್ನು ಎದುರಿಸುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ತಹಶೀಲ್ದಾರ್ ರವರು, ಸಮಾಜ ಕಲ್ಯಾಣ ಅಧಿಕಾರಿಗಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗ್ರಾಮದ ಜನರಿಗೆ ಧೈರ್ಯ ಮತ್ತು ಸ್ಥೈರ್ಯ ತುಂಬ ಬೇಕಿತ್ತು ಆದರೆ ಅಧಿಕಾರಿಗಳು ಈ ಒಂದು ಕೆಲಸವನ್ನು ಮಾಡದಿರುವುದು ಖಂಡನೀಯ ಎಂದರು.

 ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ರಾಜಶೇಖರ ಮೂರ್ತಿ,ತಾಲ್ಲೂಕು ಸಂಚಾಲಕ ,ಬಸವರಾಜು, ನಾಗರಾಜು ,ಗಂಗಾಧರ ,ಚಿನ್ನಸ್ವಾಮಿ, ಸಿದ್ದರಾಜು, ಮಹೇಂದ್ರ, ನವೀನ, ಶಿವಲಿಂಗಮೂರ್ತಿ ,ಸಾಗರ್, ಸುರೇಶ ,ರಂಗಸ್ವಾಮಿ, ಚಿನ್ನಸ್ವಾಮಿ, ಹಾಗೂ ಮಹಿಳೆಯರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು

Post a Comment

Previous Post Next Post