ಸ್ವಾರ್ಥ ರಾಜಕಾರಣಕ್ಕಾಗಿ ಜನರನ್ನು ದಾರಿ ತಪ್ಪಿಸುವ ಕೆಲಸ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುವುದಿಲ್ಲ : ಶಿವಲಿಂಗೇಗೌಡ


ಅರಸೀಕೆರೆ:- ಕುಡಿಯುವ ನೀರು ಸಂಚರಿಸಲು ಯೋಗ್ಯವಾದ ರಸ್ತೆ ಹೀಗೆ ಕನಿಷ್ಠ ಮೂಲಭೂತ ಸೌಕರ್ಯಗಳಿಂದಲೂ ವಂಚಿತರಾಗಿದ್ದ ಕ್ಷೇತ್ರದ ಜನತೆಗೆ ಇಂದು ಶಾಶ್ವತ ಪರಿಹಾರವನ್ನು ದೊರಕಿಸಿಕೊಡುವಲ್ಲಿ ನಾನು ಯಶಸ್ವಿಯಾಗಿದ್ದೇನೆ ಆ ಮೂಲಕ ನನ್ನ ಕ್ಷೇತ್ರದ ಜನತೆಯ ಋಣ ತೀರಿಸಿದ್ದೀನಿ ಎಂದು ಶಾಸಕ ಕೆ ಎಂ ಶಿವಲಿಂಗೇಗೌಡ ಹೇಳಿದರು 

ಲೋಕೋಪಯೋಗಿ ಇಲಾಖೆವತಿಯಿಂದ ಸುಮಾರು 2 ಕೋಟಿ ವೆಚ್ಚದಲ್ಲಿ, ತಾಲೂಕಿನ ಗಂಡಸಿಯಿಂದ ಮಹದೇವರಹಳ್ಳಿವರಗೆ ರಸ್ತೆ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯವನ್ನು ನೆರವೇರಿಸಿ ಮಾತನಾಡಿದ ಅವರು ಹೋಬಳಿವಾರು ತಲೆ ಎತ್ತಿ ನಿಂತಿರುವ ವಸತಿ ಶಾಲೆಗಳು ಬರದಿಂದ ಸಾಗಿರುವ ಎತ್ತಿನಹೊಳೆ ಹಾಗೂ ಬಹು ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಕಾಮಗಾರಿಗಳು ಅಭಿವೃದ್ಧಿ ಕೆಲಸ ಕಾರ್ಯಗಳು ಅಲ್ಲವೇ ಎಂಬುದನ್ನು ಮತದಾರನೇ ಕೇಳಿ ತಿಳಿದುಕೊಳ್ಳಿ ಎಂದ ಅವರು ಸ್ವಾರ್ಥ ರಾಜಕಾರಣಕ್ಕಾಗಿ ಜನರನ್ನು ದಾರಿ ತಪ್ಪಿಸುವ ಕೆಲಸ ಅರಸೀಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುವುದಿಲ್ಲ  ಎಂದರು

ಕೃಷಿ ಚಟುವಟಿಕೆಗೆ ಇರಲಿ ಶಾಪಗ್ರಸ್ತರಂತೆ   ಕುಡಿಯುವ ನೀರಿಗೂ ಸಹ ಪರಿತಪಿಸುತ್ತಿದ್ದ ಕ್ಷೇತ್ರದ ಜನತೆಗೆ ನೂರಾರು ಕಿಮೀ ದೂರದಿಂದ ನದಿ ನೀರು ತಂದು ಪೂರೈಕೆ ಮಾಡಲಾಗಿದೆ ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುವು ಮಾಡುವ ದೃಷ್ಟಿಯಿಂದ ಹೋಬಳಿವಾರು ವಸತಿ ಶಾಲೆಗಳನ್ನು ನಿರ್ಮಿಸಿಕೊಡಲಾಗಿದೆ ದೇಶಕ್ಕೆ ಸ್ವಾತಂತ್ರ್ಯ ಬಂದು ಆರೂವರೆ ದಶಕಗಳು ಕಳೆದರೂ ಗ್ರಾಮೀಣ ಭಾಗವಿರಲಿ ನಗರ ವ್ಯಾಪ್ತಿಯಲ್ಲಿ ಸಂಚರಿಸಲು ಉತ್ತಮ ರಸ್ತೆಗಳಿರಲಿಲ್ಲ ನಾನು ಕ್ಷೇತ್ರದ ಶಾಸಕನಾದ ಬಳಿಕ ನಗರದ ಪ್ರತಿಯೊಂದು ಬಡಾವಣೆ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ವಿಷಯದಲ್ಲಿ ಕ್ರಾಂತಿ ಮಾಡಿದ್ದು ಇಂದು ಜನತೆ ಸುಗಮವಾಗಿ ಸಂಚರಿಸುತ್ತಿದ್ದಾರೆ ಇವುಗಳೆಲ್ಲ ಅಭಿವೃದ್ಧಿ ಕೆಲಸ ಕಾರ್ಯಗಳಲ್ಲೇ ಎಂಬುದನ್ನು ನನ್ನನ್ನು ಟೀಕಿಸುವ ಪ್ರತಿಪಕ್ಷದ ನಾಯಕರು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಲಿ ಎಂದರು
ನನ್ನ ರಾಜಕೀಯ ವಿರೋ„ಗಳ ಟೀಕೆ ಹಾಗೂ ಟಿಪ್ಪಣಿ ಮತ್ತು ಗಿಮಿಕ್ ರಾಜಕಾರಣಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಕ್ಷೇತ್ರದ ಮತದಾರರು ನನ್ನ ಮೇಲೆ ಇಟ್ಟಿರುವ ನಂಬಿಕೆ ಹಾಗೂ ವಿಶ್ವಾಸಕ್ಕೆ ನಾನು ಋಣಿಯಾಗಿದು ನನ್ನ ಮುಂದಿನ ಹೋರಾಟ ತಾಲ್ಲೂಕಿನ ಕೆರೆ ಕಟ್ಟೆಗಳಿಗೆ ನದಿ ನೀರು ತುಂಬಿಸುವ ನಿಟ್ಟಿನಲ್ಲಿ ಹೋರಾಡುತ್ತೇನೆ ನನ್ನ ಹೋರಾಟಕ್ಕೆ ತಾಲೂಕಿನ ಜನತೆ ನನ್ನ ಜೊತೆ ಕೈಜೋಡಿಸುವಂತೆ ಮನವಿ ಮಾಡಿದರು
 ಜೆಡಿಎಸ್ ಮುಖಂಡ ಗಂಗಾಧರ್ ಮಾತನಾಡಿ  ಶಾಸಕ ಶಿವಲಿಂಗೇಗೌಡರ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮೆಚ್ಚಿ ಕ್ಷೇತ್ರದ ಮತದಾರರು ಸತತ ಮೂರು ಬಾರಿ ದಾಖಲೆ ಮತಗಳನ್ನು ನೀಡಿ ಚುನಾಯಿಸಿದ್ದಾರೆ ನಮ್ಮ ಶಾಸಕರು ಮತ್ತು ಕ್ಷೇತ್ರದ ಜನತೆಯ ನಡುವೆ ಮಧುರವಾದ ಸಂಬಂಧವಿದೆ ಇದು ಯಾರ ಸ್ವಾರ್ಥ ರಾಜಕಾರಣಕ್ಕೂ  ಕದಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು

ಮಾಜಿ ಜಿಪಂ ಸದಸ್ಯ ಹುಚ್ಚೇಗೌಡ,  ನಾಗರಹಳ್ಳಿ ಕೃಷ್ಣೇಗೌಡ ಗಂಡಸಿ ಗ್ರಾಮದವರಾದ ಅಯ್ಯಣ್ಣ, ನಾಗರಾಜಣ್ಣ, ಮಂಜಣ್ಣ, ಎ.ಪಿ.ಎಂ.ಸಿ ಜಯರಾಂ , ಜಟ್ಟಿ ಮತ್ತಿತರ ಗ್ರಾಮಸ್ಥರು, ಇಲಾಖೆಯ ಎ.ಇ.ಇ ನಟೇಶ್, ಗುತ್ತಿಗೆದಾರ ವೆಂಕಟೇಶ ಹಾಜರಿದ್ದರು

Post a Comment

Previous Post Next Post