ಸಕಲೇಶಪುರದಲ್ಲಿ ನಡೆದ ನೈಜ ಘಟನೆ ಸಿನಿಮಾ ಮೂಲಕ ತೆರೆಮೇಲೆ

ರಮ್ಯ ಫಾರ್ ಲವ್ ಇದೊಂದು ನೈಜ ಘಟನೆಯನ್ನಾಧರಿಸಿದ ಸಿನಿಮಾವಾಗಿದೆ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಂತೆ ಕರ್ನಾಟಕದ ಸ್ವಿಜರ್ಲ್ಯಾಂಡ್ ಸಕಲೇಶಪುರ ಈ ಸಕಲೇಶಪುರದಲ್ಲಿ ನಡೆದ ನೈಜ ಘಟನೆಯನ್ನು ಒಂದು ಕಥೆ ಮಾಡಿ ಸಿನಿಮಾ ಮೂಲಕ ತೆರೆಮೇಲೆ ತರಲು ನಿರ್ದೇಶಕ ಮನುಗೌಡ ಮಾಲ್ಮನೆ ರವರು ಸಜ್ಜಾಗಿದ್ದಾರೆ
ಈ ಚಿತ್ರದ ಸುಮಾರು ಭಾಗ ಸಕಲೇಶಪುರದಲ್ಲಿ ಹಾಗೂ ಮತ್ತುಳಿದ ಭಾಗ ಮಂಗಳೂರು, ಮೈಸೂರು ,ಚನ್ನಪಟ್ಟಣ ,ರಾಜಸ್ಥಾನ್, ಮಹಾರಾಷ್ಟ್ರ ಹಾಗೂ ಡೆಲ್ಲಿಯಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಮನು ತಿಳಿಸಿದ್ದಾರೆ

ಸದ್ಯ ಈ ಸಿನಿಮಾ ತೆರೆಕಾಣಲು ಸಜ್ಜಾಗುತ್ತಿದ್ದು ಬುಧವಾರ ನಡೆದ ಕಾರ್ಯಕ್ರಮದಲ್ಲಿ ನಿರ್ದೇಶಕ ಮನುಗೌಡ ಮಾಲ್ಮನೆ , ಕ್ಲಾಸ್-ಮಾಸ್ ಸಂಭಾಷಣೆಕಾರದ ಮಳವಳ್ಳಿ ಸಾಯಿಕೃಷ್ಣ, ನಟ ಭರತ್, ನಟಿ ಐಶ್ವರ್ಯ , ಹಿರಿಯ ಕಲಾವಿದೆ ಸುಧಾ ಮತ್ತು ನಿರ್ಮಾಪಕರಾದಂತ ಸಂತೋಷ್ ಹಾಗೂ ರೇಣುಕಾ ಮತ್ತಿತರು ಪಾಲ್ಗೊಂಡಿದ್ದರು

Post a Comment

Previous Post Next Post