ಚುನಾವಣೆ ಎಣಿಕೆ ನೆಪವಾಗಿಸಿ ತಹಶೀಲ್ದಾರ್ ಆದೇಶದಂತೆ ಪಟ್ಟಣದ ಹಳೆ ಬಸ್ ನಿಲ್ದಾಣದಿಂದ ಸಾರಿಗೆ ಸಂಚಾರ ಬದಲಿಸಿದ ಕಾರಣ ನಿತ್ಯ ಪರ ಊರುಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ವಿದ್ಯಾರ್ಥಿಗಳಿಗೆ ಹಾಗೂ ವೃದ್ದರಿಗೆ ತೀವ್ರ ತೊಂದರೆಯಾಯಿತು.
ಬದಲಿ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂಬ ಮಾಹಿತಿ ಇಲ್ಲದೆ ಅದೆಷ್ಟೋ ಪ್ರಯಾಣಿಕರು ಹಳೆಬಸ್ ನಿಲ್ದಾಣ, ಗಣೇಶ ದೇವಸ್ಥಾನ, ಎಪಿಎಂಸಿ ನಿಲ್ದಾಣದಲ್ಲಿ ಬಸ್ ಬರುವುದಾಗಿ ಕಾದು ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬಸ್ ಗಳನ್ನು ಹೊಸ್ ಬಸ್ ನಿಲ್ದಾಣದಿಂದ ಬರಗೂರ್ ಹ್ಯಾಂಡ್ ಪೆÇೀಸ್ಟ್ ಮೂಲಕ ಸಂಚಾರಕ್ಕೆ ಅವಕಾಶ ನೀಡಲಾಗಿ ತ್ತಾದರೂ ಅಲ್ಲಿಯವರೆಗೆ ಆಟೋಗೆ ಬಾಡಿಗೆ ನೀಡಿ ತೆರಳಬೇಕಾದ ಅನಿವಾರ್ಯತೆ ಎದುರಾಯಿತು. ಅಲ್ಲದೆ ಖಾಸಗಿ ವಾಹನದ ಮೂಲಕ ತೆರಳಿ ಅಲ್ಲಿಂದ ಸಾರಿಗೆ ಬಸ್ ಹತ್ತಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಸಾರ್ವಜನಿಕವಾಗಿ ಅಸಮಾಧಾನ ಕೇಳಿಬಂತು.
ಇಷ್ಟು ಜನ ನವೋದಯ ಕಾಲೇಜು ಮತ ಎಣಿಕೆ ಕೇಂದ್ರದ ಬಳಿ ಸೇರಲಿದ್ದಾರೆ ಎಂಬ ಮಾಹಿತಿ ತಾಲ್ಲೂಕು ಆಡಳಿತಕ್ಕೆ ಮೊದಲೇ ತಿಳಿದಿತ್ತು. ಈ ಕೇಂದ್ರದ ಬದಲಿಗೆ ಅಗ್ನಿಶಾಮಕ ಠಾಣೆ ಸಮೀಪದ ಪದವಿ ಕಾಲೇಜಿನಲ್ಲಿ ಅಥವಾ ಆದಿಚುಂಚನಗಿರಿ ಪದವಿ ಕಾಲೇಜಿನಲ್ಲಿ ವ್ಯವಸ್ಥೆ ಮಾಡಿದ್ದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿರಲಿಲ್ಲಾ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಒಟ್ಟಾರೆ ಅಧಿಕಾರಿಗಳ ಎಡವಟ್ಟು ಆದೇಶದ ಕಾರಣ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಎಷ್ಟು ಸರಿ ಎಂಬುದು ಪ್ರಯಾಣಿಕರ ಪ್ರಶ್ನೆಯಾಗಿದೆ.