ಸೊಸೆಯ ಸೋಲಿಸಿದ ಅತ್ತೆ, ಕಲ್ಲಹಳ್ಳಿಯಲ್ಲಿ ಮಂಗಳಮುಖಿಗೆ ಗೆಲುವು

ಹಾಸನ/ಹೊಸಪೇಟೆ: ಹಾಸನ ತಾಲ್ಲೂಕಿನ ಹೆರಗು ಗ್ರಾಮ ಪಂಚಾಯಿತಿಯ ಎಚ್. ಭೈರಾಪುರ ಗ್ರಾಮದಿಂದ ಸ್ಪರ್ಧಿಸಿದ್ದ ಅತ್ತೆ ಸೊಂಬಮ್ಮ ಅವರು ಮೂರು ಮತಗಳ ಅಂತರದಿಂದ ಸೊಸೆ. ಪವಿತ್ರರನ್ನು ಸೋಲಿಸಿದ್ದಾರೆ.
ಅತ್ತೆ ಸೊಂಬಮ್ಮ 276 ಮತ ಪಡೆದಿದ್ದು, ಸೊಸೆ ಪವಿತ್ರ 273 ಮತ ಪಡೆದಿದ್ದಾರೆ.

ಮಂಗಳಮುಖಿಗೆ ಗೆಲುವು: ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯ್ತಿಯ ರಾಜಾಪುರದ ಮತ ಕ್ಷೇತ್ರದಿಂದ ಮಂಗಳಮುಖಿ ಸುಧಾ ಗೆಲುವು ಸಾಧಿಸಿದ್ದಾರೆ. ಗ್ರಾಮ ಪಂಚಾಯ್ತಿ ಸ್ಥಾಪನೆಯಾಗಿ 26 ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ಸುಧಾ ಗೆಲುವಿನ ನಗೆ ಬೀರಿದ್ದಾರೆ. ಕಳೆದ 26 ವರ್ಷಗಳಿಂದ ಇಲ್ಲಿ ಅವಿರೋಧ ಆಯ್ಕೆ ನಡೆದಿತ್ತು.

Post a Comment

Previous Post Next Post